alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಪಲ್ ಕಿಚನ್ ಟಿಪ್ಸ್ ಅನುಸರಿಸಿ ರುಚಿ-ರುಚಿ ಅಡುಗೆ ಮಾಡಿ

2017_3image_13_24_489845554kitchentips1-ll

ಮಹಿಳೆಯರ ಬಹುತೇಕ ಸಮಯ ಕಿಚನ್ ನಲ್ಲಿ ಕಳೆದು ಹೋಗುತ್ತದೆ. ಮನೆಯವರ ಮನಗೆಲ್ಲುವ ಜೊತೆಗೆ ಅವರ ಆರೋಗ್ಯದ ಬಗ್ಗೆ ಗಮನ ನೀಡಿ, ಅವರಿಗೆ ಸೂಕ್ತವೆನಿಸುವ ಆಹಾರವನ್ನು ಸಿದ್ಧಪಡಿಸಬೇಕಾಗುತ್ತದೆ. ಬೇಗ ಬೇಗ ಕಿಚನ್ ಕೆಲಸ ಮುಗಿಸಿ ಸ್ವಲ್ಪ ಸಮಯ ಮಕ್ಕಳು, ಗಂಡನ ಜೊತೆ ಕಳೆಯೋಣ ಎಂದ್ರೆ ಆಗೋದೇಯಿಲ್ಲ ಎನ್ನುವವರು ಅನೇಕರಿದ್ದಾರೆ. ಅಂತವರು ಕೆಲವೊಂದು ಕಿಚನ್ ಟಿಪ್ಸ್ ತಿಳಿದುಕೊಂಡ್ರೆ ಬಹುಬೇಗ, ಸ್ವಚ್ಛವಾಗಿ ಆಹಾರ ಮಾಡಿ ಮುಗಿಸಬಹುದು.

ಖೀರ್ ಮಾಡುವ ಮೊದಲು ಪಾತ್ರೆಗೆ ಸ್ವಲ್ಪ ನೀರು ಹಾಕಿ ನಂತ್ರ ಹಾಲನ್ನು ಹಾಕಿ. ಹೀಗೆ ಮಾಡಿದ್ರೆ ಪಾತ್ರೆಯ ತಳಕ್ಕೆ ಹಾಲು ಹಿಡಿಯುವುದಿಲ್ಲ.

ಬೇಳೆಯ ಸ್ವಾದ ಹೆಚ್ಚಿಸಲು ಬೇಳೆ ಬೇಯಿಸುವ ಮೊದಲು ಸ್ವಲ್ಪ ಹುರಿದುಕೊಳ್ಳಿ.

ನೀವು ಮಾಡುವ ಅನ್ನ ಮುದ್ದೆಯಾಗುತ್ತದೆಯೆಂದಾದ್ರೆ ಅಕ್ಕಿಯನ್ನು ತೊಳೆದು ಬೇಯಿಸಲು ಇಡುವ ಮೊದಲು ಚಿಟಕಿ ಎಣ್ಣೆ ಹಾಕಿ. ಅನ್ನ ಮುದ್ದೆಯಾಗುವುದಿಲ್ಲ.

ಬೇಳೆ ಅಥವಾ ತರಕಾರಿ ಬೇಯಿಸುವಾಗ ನೀರು ಜಾಸ್ತಿಯಾದರೆ ಚೆಲ್ಲಬೇಡಿ. ಆ ನೀರನ್ನು ಬಳಸಿ ಸಾಂಬಾರ್ ಮಾಡಿ. ನ್ಯೂಟ್ರಿಶಿಯನ್ ಸಿಗುತ್ತದೆ.

ಆಲೂಗಡ್ಡೆ ಬೇಯಿಸುವಾಗ ಒಂದು ಚಿಟಕಿ ಉಪ್ಪನ್ನು ಹಾಕಿ. ಸಿಪ್ಪೆ ತೆಗೆಯಲು ಇದು ಸುಲಭವಾಗುತ್ತದೆ.

ಇಡ್ಲಿ ಮೃದುವಾಗಲು ಇಡ್ಲಿ ಮಿಶ್ರಣಕ್ಕೆ ಸ್ವಲ್ಪ ಅನ್ನವನ್ನು ಬೆರೆಸಿ.

ಈರುಳ್ಳಿ ಕತ್ತರಿಸುವ 10 ನಿಮಿಷ ಮೊದಲು ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡಿದ್ರೆ ಕಣ್ಣಲ್ಲಿ ನೀರು ಬರುವುದಿಲ್ಲ.

ರೊಟ್ಟಿ ಮೃದುವಾಗಬೇಕಾದಲ್ಲಿ ಹಿಟ್ಟಿಗೆ ಬಿಸಿ ನೀರಿನ ಜೊತೆಗೆ ಒಂದು ಕಪ್ ಬಿಸಿ ಹಾಲನ್ನು ಹಾಕಿ.

ಕಟ್ ಮಾಡಿದ ಹಣ್ಣು ಕಪ್ಪಾಗದಂತೆ ತಡೆಯಲು ಹಣ್ಣಿನ ಮೇಲೆ ನಿಂಬೆ ರಸ ಹಚ್ಚಿ.

ಪೂರಿ ಗರಿಗರಿಯಾಗಬೇಕಾದಲ್ಲಿ ಹಿಟ್ಟಿಗೆ ಸ್ವಲ್ಪ ರವೆ ಮಿಕ್ಸ್ ಮಾಡಿ.

ತರಕಾರಿ ಹಾಗೂ ಹಣ್ಣುಗಳು ತಾಜಾ ಇರಬೇಕೆಂದ್ರೆ ಅವುಗಳನ್ನು ಪೇಪರ್ ನಲ್ಲಿ ಸುತ್ತಿಡಿ.

ಪಕೋಡಾ ಮಾಡುವ ಮೊದಲು ಎಣ್ಣೆಗೆ ಸ್ವಲ್ಪ ಉಪ್ಪನ್ನು ಹಾಕಿ. ಹೀಗೆ ಮಾಡಿದ್ರೆ ಪಕೋಡಾ ಜಾಸ್ತಿ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...