alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಭಾರತೀಯರ ಅಚ್ಚುಮೆಚ್ಚಿನ ಉಪಹಾರ

dosa1

ಭಾರತದಲ್ಲಿ ಹೆಚ್ಚು ಮಂದಿ ದೋಸೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಈ ವಿಷ್ಯ ಇತ್ತೀಚೆಗೆ ನಡೆದ ಸಂಶೋಧನೆಯೊಂದರಿಂದ ಹೊರಬಿದ್ದಿದೆ. ದೇಶದ 8 ನಗರಗಳ 12000 ಹೊಟೇಲ್ ಗಳಲ್ಲಿ ಸರ್ವೆ ಮಾಡಲಾಗಿದೆ. ಆನ್ಲೈನ್ ನಲ್ಲಿ ಗ್ರಾಹಕರು ಯಾವ ಉಪಹಾರವನ್ನು ಹೆಚ್ಚಾಗಿ ಆರ್ಡರ್ ಮಾಡ್ತಾರೆ ಎಂಬುದನ್ನು ಮಾತ್ರ ಸರ್ವೆಗೆ ತೆಗೆದುಕೊಳ್ಳಲಾಗಿದೆ.

ಆನ್ಲೈನ್ ಡಿಲೆವರಿ ಕಂಪನಿ ಸ್ವಿಗ್ಗಿ ಈ ಸರ್ವೆ ನಡೆಸಿದೆ. ಮುಂಬೈ, ಬೆಂಗಳೂರು, ದೆಹಲಿ, ಪುಣೆ ಸೇರಿದಂತೆ ಮೆಟ್ರೋ ಸಿಟಿಗಳ ಜನರು ಬೇರೆ ಆಹಾರದ ಜೊತೆಗೆ ಬೆಳಗಿನ ಉಪಹಾರಕ್ಕೆ ದೋಸೆಯನ್ನು ಹೆಚ್ಚಾಗಿ ತಿನ್ನಲು ಬಯಸ್ತಾರೆಂಬುದು ಗೊತ್ತಾಗಿದೆ.

ವಿಶೇಷವೆಂದ್ರೆ ಆನ್ಲೈನ್ ಆರ್ಡರ್ ಅತಿ ಹೆಚ್ಚಾಗಿ ಬಂದಿರೋದು ಬೆಂಗಳೂರಿನಿಂದ. ಬೆಂಗಳೂರಿಗರ ಮೊದಲ ಆದ್ಯತೆ ಮಸಾಲೆ ದೋಸೆ. ನಂತ್ರ ಇಡ್ಲಿ-ವಡಾ ಆರ್ಡರ್ ಮಾಡ್ತಾರಂತೆ. ಆನ್ಲೈನ್ ನಲ್ಲಿ ಉಪಹಾರ ಆರ್ಡರ್ ಮಾಡುವ ಪ್ರಮಾಣ ಹೆಚ್ಚಾಗ್ತಿದೆ. ಭಾರತೀಯರಿಗೆ  ಬೆಳಗಿನ ಉಪಹಾರದ ಮಹತ್ವ ಗೊತ್ತು. ಸಮಯದ ಅಭಾವದಿಂದಾಗಿ ಹೊಟೇಲ್ ಮೊರೆ ಹೋಗ್ತಿದ್ದಾರೆ. ವೀಕೆಂಡ್ ನಲ್ಲಿ ಆರ್ಡರ್ ಮಾಡುವ ಪ್ರಮಾಣ ಜಾಸ್ತಿ ಇರುತ್ತದೆ ಎಂದು ಸರ್ವೆಯಲ್ಲಿ ಹೇಳಲಾಗಿದೆ.

ಸಮೀಕ್ಷೆ ಪ್ರಕಾರ ಮೆಟ್ರೋ ಸಿಟಿಗಳಲ್ಲಿ ಬೆಳಗಿನ ಉಪಹಾರದ ಆಯ್ಕೆ ಹೀಗಿದೆ:

ಬೆಂಗಳೂರು : ಮಸಾಲೆ ದೋಸೆ, ಇಡ್ಲಿ-ವಡಾ, ಅವಲಕ್ಕಿ

ಚೆನ್ನೈ : ಇಡ್ಲಿ, ಪ್ಲೇನ್ ದೋಸೆ

ಮುಂಬೈ : ಮಸಾಲೆ ದೋಸೆ, ಪ್ಲೇನ್ ದೋಸೆ, ಬನ್-ಮಸ್ಕಾ

ದೆಹಲಿ : ಚೋಲೆ ಬಟೂರೆ, ಪರೋಟಾ, ದೋಸೆ

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...