alex Certify
ಕನ್ನಡ ದುನಿಯಾ       Mobile App
       

Kannada Duniya

ಹಳದಿ ಪ್ಲೇಟ್ ಮೇಲೆ ಸೆರೆಯಾಗಿದೆ ಭಾರತದ ವೈವಿಧ್ಯಮಯ ತಿನಿಸು

my-yellow-plate-indian-food_650x400_41498040097-1ಭಾರತ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ಪ್ರತಿಯೊಂದು ರಾಜ್ಯದ ಆಚಾರ, ವಿಚಾರ, ಭಾಷೆ ಮಾತ್ರವಲ್ಲ ಆಹಾರವೂ ವಿಭಿನ್ನವಾಗಿರುತ್ತದೆ. ದೆಹಲಿ ಮೂಲದ ಬ್ಲಾಗರ್ ಒಬ್ಬರು ತಮ್ಮ ಯಲ್ಲೋ ಪ್ಲೇಟ್ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಪ್ರಸಿದ್ದಿ ಪಡೆದಿರುವ ಆಹಾರವನ್ನು ಸೆರೆ ಹಿಡಿದಿದ್ದಾರೆ.

ಫುಡ್ ಬ್ಲಾಗರ್ ಹಿಮಾಂಶು ಸೆಹಗಲ್ ಸ್ವತಃ ತಿನಿಸು ಪ್ರಿಯರೂ ಹೌದು. ಜೊತೆಗೆ ಪ್ರವಾಸವನ್ನೂ ಬಹುವಾಗಿ ಇಷ್ಟಪಡುತ್ತಾರೆ. ‘My Yellow Plate’ ಎಂಬ ಅವರ ಬ್ಲಾಗ್ ಬಹು ಜನಪ್ರಿಯತೆ ಪಡೆದಿದೆಯಲ್ಲದೇ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ 21 ಸಾವಿರಕ್ಕೂ ಅಧಿಕ ಫಾಲೋವರ್ ಗಳನ್ನು ಹಿಮಾಂಶು ಸೆಹಗಲ್ ಹೊಂದಿದ್ದಾರೆ.

ಭಾರತದ ವಿವಿಧ ಭಾಗಗಳಲ್ಲಿ ಜನಪ್ರಿಯತೆ ಪಡೆದಿರುವ ಆಹಾರ ಪದಾರ್ಥವನ್ನು ಆಯಾ ಪ್ರದೇಶಕ್ಕೇ ತೆರಳಿ ತಮ್ಮ ‘ಯಲ್ಲೋ ಪ್ಲೇಟ್’ ನಲ್ಲಿ ಹಿಮಾಂಶು ಸೆಹಗಲ್ ಸೆರೆ ಹಿಡಿದಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಿಮಾಂಶು ಸೆಹಗಲ್ ಕೇವಲ ಆಹಾರದ ಕುರಿತು ಮಾತ್ರ ಮಾಹಿತಿ ನೀಡಿಲ್ಲ. ಇದರ ಜೊತೆಗೆ ಸ್ಥಳದ ವಿವರ, ಆಹಾರ ತಯಾರಿಸುವ ವಿಧಾನ, ಅದನ್ನು ಸಿದ್ದಪಡಿಸಿದವರ ಮಾಹಿತಿಯನ್ನೂ ನೀಡಿದ್ದಾರೆ.1495793943_15826374_1712813302381706_633150356235990819_n

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...