alex Certify ಸುಲಭವಾಗಿ ತಯಾರಿಸಬಹುದಾದ ʼವೆಜಿಟೆಬಲ್ʼ ಕಟ್ ಲೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ತಯಾರಿಸಬಹುದಾದ ʼವೆಜಿಟೆಬಲ್ʼ ಕಟ್ ಲೆಟ್

ವೆಜಿಟೆಬಲ್ ಕಟ್ ಲೆಟ್ ಎಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ ಲೆಟ್ ಕುರಿತ ಮಾಹಿತಿ ಇಲ್ಲಿದೆ. ನೀವು ಒಮ್ಮೆ ಪ್ರಯತ್ನಿಸಿ

ಬೇಕಾಗುವ ಪದಾರ್ಥಗಳು: ವೆಜಿಟೆಬಲ್ ಕಟ್ ಲೆಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಇಂತಿವೆ.100 ಗ್ರಾಂ ಬೀನ್ಸ್, 100 ಗ್ರಾಂ ಕ್ಯಾರೆಟ್, 1 ಬೆಂದ ಆಲೂ, 3-4 ಸ್ಲೈಸ್ ಬ್ರೌನ್ ಬ್ರೆಡ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ದಾಳಿಂಬೆ ಬೀಜದ ಪುಡಿ, 2-3 ಚಮಚ ಎಣ್ಣೆ.

ತಯಾರಿಸುವ ವಿಧಾನ: ಬೀನ್ಸ್, ಕ್ಯಾರೆಟ್ ಗಳನ್ನು ಸಣ್ಣಗೆ ಹೋಳಾಗಿಸಿಕೊಂಡು, ಇದಕ್ಕೆ ನೀರು ಸಿಂಪಡಿಸಿ 3-4 ನಿಮಿಷ ಮೈಕ್ರೋವೇವ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಅದನ್ನು ಮಿಕ್ಸರ್ ಗೆ ಹಾಕಿ ಡ್ರೈ ಕ್ರಂಬ್ಸ್ ಮಾಡಿಕೊಂಡು, ರುಬ್ಬಿದ ಮಿಶ್ರಣಕ್ಕೆ ಕ್ರಂಬ್ಸ್, ಮಸೆದ ಆಲೂ, ಉಪ್ಪು, ಖಾರ ಮತ್ತು ದಾಳಿಂಬೆ ಬೀಜದ ಪುಡಿ ಹಾಕಿ ಕಲೆಸಿರಿ.

ಇದರಿಂದ ಕಟ್ ಲೆಟ್ ಮಾಡಿಕೊಳ್ಳಿ. ನಾನ್ ಸ್ಟಿಕ್ ಪ್ಯಾನ್ ಗೆ ಎಣ್ಣೆ ಹಾಕಿ, ಅದರಲ್ಲಿ ಕಟ್ ಲೆಟ್ ಗಳನ್ನು ಎರಡೂ ಬದಿ ಬೇಯಿಸಿ, ಕೆಂಬಣ್ಣಕ್ಕೆ ಬಂದಾಗ ತೆಗೆಯಿರಿ. ಬಳಿಕ ರುಚಿಯಾದ ಕಟ್ ಲೆಟ್ ರುಚಿಯನ್ನು ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...