alex Certify ಹಬ್ಬದ ಸಂಭ್ರಮ ಹೆಚ್ಚಿಸುವ ‘ಗೋಡಂಬಿ’ ಬರ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಸಂಭ್ರಮ ಹೆಚ್ಚಿಸುವ ‘ಗೋಡಂಬಿ’ ಬರ್ಫಿ

ಬೇಕಾಗುವ ಪದಾರ್ಥಗಳು : ಗೋಡಂಬಿ- 2 ಕಪ್, ತುಪ್ಪ- 1 ಕಪ್, ಸಕ್ಕರೆಪುಡಿ- 1 ಕಪ್, ಹಾಲು- 3/4 ಕಪ್, ಏಲಕ್ಕಿಪುಡಿ- 1/2 ಚಮಚ.

ತಯಾರಿಸುವ ವಿಧಾನ : ಗೋಡಂಬಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ, ಬಾಣಲೆಯನ್ನು ಒಲೆ ಮೇಲೆ ಇಟ್ಟು ಗೋಡಂಬಿ ಪುಡಿ ಜೊತೆಗೆ 1 ಚಮಚ ತುಪ್ಪ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಸಕ್ಕರೆ ಪುಡಿ, ಉಳಿದ ತುಪ್ಪ, ಹಾಲು ಹಾಕಿ ಸಣ್ಣ ಉರಿಯಲ್ಲಿ ಮಗಚುತ್ತಾ ಇರಿ ಎಲ್ಲವೂ ಸೇರಿಕೊಂಡ ಮೇಲೆ ಪಾಕ ತಳ ಬಿಟ್ಟು ಬರುತ್ತದೆ.

ಆಗ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಎಲ್ಲ ಹೊಂದಿಕೊಂಡ ಬಳಿಕ ತಟ್ಟೆಗೆ ತುಪ್ಪ ಸವರಿ, ತಟ್ಟಿ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಗೋಡಂಬಿ ಬರ್ಫಿ ಸವಿಯಲು ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...