alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸಿಗೆಯಲ್ಲಿ ಕುಡಿಯಿರಿ ಮಾವಿನ ಕಾಯಿ ಜ್ಯೂಸ್

images-1ಬೇಸಿಗೆಯಲ್ಲಿ ಎಷ್ಟು ನೀರು ಕುಡಿದ್ರೂ ಸಾಕಾಗೋದಿಲ್ಲ. ಲಿಂಬು ಜ್ಯೂಸ್, ಕೋಕಂ ಜ್ಯೂಸ್, ಮಜ್ಜಿಗೆ ಹೀಗೆ ಆರೋಗ್ಯಕ್ಕೆ ಒಳ್ಳೆಯದಾದ ಹಾಗೂ ದೇಹಕ್ಕೆ ತಂಪೆನಿಸುವ ಜ್ಯೂಸ್ ಕುಡಿಯಲು ಎಲ್ಲರೂ ಬಯಸ್ತಾರೆ. ಮಾವಿನ ಕಾಯಿಯಿಂದ ಕೂಡ ಜ್ಯೂಸ್ ಮಾಡಬಹುದು.

ಮಾವಿನ ಕಾಯಿ ಜ್ಯೂಸ್ ಗೆ ಬೇಕಾಗುವ ಪದಾರ್ಥ:

ಮಾವಿನ ಕಾಯಿ – 1

ಜೀರಿಗೆ ಪುಡಿ – 2 ಚಮಚ

ಕಾಳು ಮೆಣಸು – 2

ಕಪ್ಪು ಉಪ್ಪು – 2 ಚಮಚ

ಸಕ್ಕರೆ – 100-150 ಗ್ರಾಂ

ಪುದೀನಾ ಎಲೆ- 20-30

ಮಾವಿನ ಕಾಯಿ ಜ್ಯೂಸ್ ಮಾಡುವ ವಿಧಾನ:

ಮೊದಲು ಮಾವಿನ ಕಾಯಿಯ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿ. ಸಣ್ಣದಾಗಿ ಹೆಚ್ಚಿಕೊಂಡ ಮಾವಿನ ಕಾಯಿಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಿ.

ನಂತ್ರ ಮಿಕ್ಸಿ ಜಾರ್ ಗೆ ಬೇಯಿಸಿದ ಮಾವಿನಕಾಯಿ ಹೋಳು, ಪುದೀನಾ ಎಲೆ, ಸಕ್ಕರೆ, ಉಪ್ಪು ಹಾಗೂ ಕಾಳು ಮೆಣಸನ್ನು ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಎರಡು ಲೋಟ ನೀರು ಹಾಕಿ ಜ್ಯೂಸ್ ಸಿದ್ದಮಾಡಿ. ತಣ್ಣನೆಯ ಜ್ಯೂಸ್ ಕುಡಿಯಬಯಸುವವರು ಇದಕ್ಕೆ ಐಸ್ ಹಾಕಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...