alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ದಾಖಲೆಗೆ ಪಾತ್ರವಾಗ್ತಿದೆ ‘ಖಿಚಡಿ’

ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ವರ್ಲ್ಡ್ ಫುಡ್ ಇಂಡಿಯಾ ಫೆಸ್ಟಿವಲ್ ನಲ್ಲಿ ಭಾರತದ ಖ್ಯಾತ ಚೆಫ್ ಸಂಜೀವ್ ಕಪೂರ್, 50 ಮಂದಿ ಸ್ವಯಂ ಸೇವಕರೊಂದಿಗೆ ತಯಾರಿಸಿರುವ ಖಿಚಡಿ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗುತ್ತಿದೆ.

ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ 918 ಕೆ.ಜಿ. ಯ ಖಿಚಡಿಯನ್ನು ಸಂಜೀವ್ ಕಪೂರ್ ಮತ್ತವರ ತಂಡ ತಯಾರಿಸಿದ್ದು, ಇದನ್ನು ದೆಹಲಿಯ ಕೊಳಗೇರಿ ನಿವಾಸಿ ಮಕ್ಕಳಿಗೆ ವಿತರಿಸಲಾಗಿದೆ.

ಗಿನ್ನಿಸ್ ದಾಖಲೆ ಸಲುವಾಗಿ 1000 ಲೀಟರ್ ಸಾಮರ್ಥ್ಯದ, 7 ಅಡಿ ವ್ಯಾಸದ ಕಡಾಯಿಯನ್ನು ವಿಶೇಷವಾಗಿ ರೂಪಿಸಲಾಗಿದ್ದು, ಇದರಲ್ಲಿ ಖಿಚಡಿಯನ್ನು ತಯಾರಿಸಲಾಗಿದೆ. ಖಿಚಡಿ ತಯಾರಿಗೆ ಸಂಪೂರ್ಣವಾಗಿ ಭಾರತದ ಧಾನ್ಯಗಳನ್ನೇ ಬಳಸಲಾಗಿದೆ ಎಂದು ಚೆಫ್ ಸಂಜೀವ್ ಕಪೂರ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...