alex Certify ʼಮೊಟ್ಟೆʼ ಬೇಯಿಸುವಾಗ ಒಡೆಯದೆ ಇರಲು ಈ ಟ್ರಿಕ್ಸ್ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಟ್ಟೆʼ ಬೇಯಿಸುವಾಗ ಒಡೆಯದೆ ಇರಲು ಈ ಟ್ರಿಕ್ಸ್ ಅನುಸರಿಸಿ

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕೆಲವರು ಇದನ್ನು ಬೇಯಿಸಿ ತಿನ್ನುತ್ತಾರೆ. ಆದರೆ ಮೊಟ್ಟೆ ಬೇಯಿಸುವಾಗ ಕೆಲವೊಮ್ಮೆ ಒಡೆದು ಹೋಗುತ್ತದೆ.

ಅದು ಒಡೆಯದಂತೆ ಮಾಡಲು ಈ ವಿಧಾನಗಳನ್ನು ಅನುಸರಿಸಿ.

* ಮೊಟ್ಟೆಯನ್ನು ಬೇಯಿಸುವಾಗ ಅದಕ್ಕೆ ಒಂದು ಚಮಚ ಉಪ್ಪು ಹಾಕಿ, ಆಗ ಮೊಟ್ಟೆ ಒಡೆದು ಹೋಗುವುದಿಲ್ಲ.

* ಬೇಯಿಸುವ ಮೊದಲು ಮೊಟ್ಟೆಯನ್ನು ರೂಮ್ ಟೆಂಪರೇಚರ್ ಗೆ ತನ್ನಿ. ಅಂದರೆ ಫ್ರಿಡ್ಜ್ ನಲ್ಲಿಟ್ಟಿದ್ದರೆ ಅದನ್ನು ಕೂಡಲೇ ಬೇಯಿಸಬೇಡಿ. ಬದಲಿಗೆ ಅದನ್ನು ಹೊರ ತೆಗೆದು ತಂಪು ಆರಿದ ನಂತರ ಬೇಯಿಸಿ.

* ಫ್ರೆಶ್ ಮೊಟ್ಟೆಗಳ ಬದಲಾಗಿ ಹಳೆಯ ಮೊಟ್ಟೆಗಳನ್ನು ಬಳಸಿ. ಯಾಕಂದರೆ ಆ ಮೊಟ್ಟೆಯ ಸಿಪ್ಪೆ ಗಟ್ಟಿಯಾಗಿರುತ್ತದೆ.

* ಬೇಯಿಸುವ ಮೊದಲು ಸೇಫ್ಟಿ ಪಿನ್ ಮೂಲಕ ಸಣ್ಣದಾಗಿ ಶೆಲ್ ಮೇಲೆ ಚುಚ್ಚಿ. ಇದರಿಂದ ಮೊಟ್ಟೆ ಒಡೆದು ಹೋಗಲು ಕಾರಣವಾಗುವ ಏರ್ ಬಬಲ್ ಉಂಟಾಗುವುದಿಲ್ಲ.

* ಒಂದು ಬೌಲ್‍ ನಲ್ಲಿ ಹಲವಾರು ಮೊಟ್ಟೆಗಳನ್ನು ಹಾಕಬೇಡಿ. ಇದರಿಂದ ಒಡೆದು ಹೋಗುವ ಸಾಧ್ಯತೆ ಹೆಚ್ಚು.

* ನೀರಿಗೆ ಅರ್ಧ ಚಮಚ ಉಪ್ಪು ಬೆರೆಸಿ ಬೇಯಿಸಿ. ಇದರಿಂದ ಸುಲಭವಾಗಿ ಮೊಟ್ಟೆಯ ಸಿಪ್ಪೆ ತೆಗೆಯಲು ಸಹಾಯವಾಗುತ್ತದೆ. ಅಲ್ಲದೇ ಮೊಟ್ಟೆ ಕ್ರಾಕ್ ಆಗೋದರಿಂದ ಬಚಾವಾಗಬಹುದು.

* ಮೊಟ್ಟೆಯನ್ನು ಯಾವತ್ತೂ ಬಿಸಿ ನೀರಿಗೆ ನೇರವಾಗಿ ಹಾಕಬೇಡಿ. ಇದರಿಂದ ಮೊಟ್ಟೆ ಬೇಗನೆ ಒಡೆದು ಹೋಗುತ್ತದೆ.

* ಒಂದು ಮೊಟ್ಟೆಗೆ ಸರಿಯಾದಂತೆ ಒಂದು ಚಮಚ ವಿನೇಗರ್ ಹಾಕಿ. ನಂತರ ಮೊಟ್ಟೆಯನ್ನು ಬಿಸಿ ಮಾಡಿ. ಇದರಿಂದ ಮೊಟ್ಟೆಯ ಬಿಳಿ ಭಾಗ ಬೇಗನೆ ಗಟ್ಟಿಯಾಗುತ್ತದೆ ಹಾಗೂ ಒಡೆಯುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...