alex Certify ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಚಪಾತಿ ಮಾಡುತ್ತಿರುತ್ತಾರೆ. ರಾತ್ರಿ ಊಟಕ್ಕೆ, ಮಕ್ಕಳ ಲಂಚ್ ಬಾಕ್ಸ್ ಗೆ ಚಪಾತಿಯಂತು ಬೇಕೆ ಬೇಕು. ಕೆಲವು ಮಕ್ಕಳು ತರಕಾರಿಗಳನ್ನು ಹೆಚ್ಚು ತಿನ್ನುವುದಿಲ್ಲ.

ಅಂತಹ ಮಕ್ಕಳಿಗೆ ಚಪಾತಿ ಜತೆ ಈ ತರಕಾರಿಗಳನ್ನು ಸೇರಿಸಿದರೆ ಬಹಳ ಖುಷಿಯಿಂದ ತಿನ್ನುತ್ತವೆ. ಆರೋಗ್ಯಕ್ಕೂ ಒಳ್ಳೆಯದು ಬೇಗನೇ ಕೂಡ ಮಾಡಿಕೊಳ್ಳಬಹುದು.

ಬೇಕಾಗುವ ಸಾಮಾಗ್ರಿ: 1 ಮೂಲಂಗಿ, 1 ಕ್ಯಾರೆಟ್, ಅರ್ಧ ಕಟ್ಟು ಮೆಂತೆಸೊಪ್ಪು, ಸ್ವಲ್ಪ ಜೀರಿಗೆ, 2 ಕಪ್ ಗೋಧಿಹಿಟ್ಟು. ಸ್ವಲ್ಪ ನೀರು.

ಮಾಡುವ ವಿಧಾನ: ಕ್ಯಾರೆಟ್, ಮೂಲಂಗಿಯನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ತುರಿಯಿರಿ. ಒಂದು ಪಾತ್ರೆಗೆ ಗೋಧಿಹಿಟ್ಟು ಹಾಕಿ ಅದಕ್ಕೆ ತುರಿದ ಕ್ಯಾರೆಟ್, ಮೂಲಂಗಿ, ದಂಟು ಬೇರ್ಪಡಿಸಿಕೊಂಡ ಮೆಂತೆಸೊಪ್ಪಿನ ಎಲೆ, 1 ಟೀ ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಇದನ್ನು ಅರ್ಧ ಗಂಟೆ ಇಡುವ ಅಗತ್ಯವಿಲ್ಲ, ಚಪಾತಿ ಲಟ್ಟಿಸಿ ಕಾಯಿಸಿ. ರುಚಿಯಾದ ತರಕಾರಿ ಚಪಾತಿ ಸವಿಯಲು ಸಿದ್ಧವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...