alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷರಿಗೆ ನಾಟುವಂತಿದೆ ಮಹಿಳೆಯ ಈ ಮಾತು

img50

ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ತಮ್ಮ ಛಾಪನ್ನು ಮೂಡಿಸಿರುವ ಮಹಿಳೆಯರು ಎಲ್ಲದರಲ್ಲೂ ಎತ್ತಿದ ಕೈ. ಆದರೂ ಕೆಲವೊಂದು ವಿಷಯಗಳಲ್ಲಿ ಪುರುಷರ ಸಂಕೋಲೆಯಲ್ಲಿಯೇ ಇದ್ದಾರೆ ಎಂಬ ಭಾವನೆಯಿದೆ. ಅದಕ್ಕೆ ಪುಷ್ಟಿ ನೀಡುವಂತೆ ಈ ಪ್ರಶ್ನೆಗಳಿವೆ.

ಪುರುಷರಿಗೆ ಸಾಮಾಜಿಕ ಜಾಲ ತಾಣ ವಾಟ್ಸಾಪ್ ನಲ್ಲಿ ಕೇಳಿದ ಈ ಪ್ರಶ್ನೆಗಳು ಮನಸ್ಸಿಗೆ ನಾಟುವಂತಿದೆ ನೋಡಿ, ಆ ಮಾತುಗಳಲ್ಲೇ ಹೇಳುವುದಾದರೆ, ದೇಹ ನನ್ನದು ಆದರೆ, ಅರಿಶಿಣ ನಿಮ್ಮ ಹೆಸರಿನಲ್ಲಿ, ಕೈ ನನ್ನದು ಆದರೆ, ಮದರಂಗಿ ನಿಮ್ಮ ಹೆಸರಲ್ಲಿ, ಬೈತಲೆ ನನ್ನದಾದರೂ ಸಿಂಧೂರ ನಿಮ್ಮ ಹೆಸರಿನಲ್ಲಿ, ಹಣೆ ನನ್ನದಾದರೂ ಕುಂಕುಮ ಹಚ್ಚುವುದು ನಿಮ್ಮ ಹೆಸರಿನಲ್ಲಿಯೇ ಅಲ್ಲವೇ ಎನ್ನುತ್ತಾರೆ. ಅಲ್ಲದೇ, ಮೂಗು ನನ್ನದಾದರೂ ಮೂಗುತಿ ನಿಮ್ಮ ಹೆಸರಿನಲ್ಲಿಯೇ ಹಾಕಿಕೊಳ್ಳಬೇಕು ಎನ್ನುತ್ತಾರವರು.

ಕೊರಳು ನನ್ನದಾದರೂ ಮಾಂಗಲ್ಯ ನಿಮ್ಮ ಹೆಸರಿನಲ್ಲಿ ಕಟ್ಟಿಕೊಳ್ಳುವೆ. ಕಾಲು ನನ್ನದಾದರೂ ಕಾಲ್ಗೆಜ್ಜೆ ನಿಮ್ಮ ಹೆಸರಿನಲ್ಲಿ, ಬೆರಳು ನನ್ನದೇ ಆಗಿದ್ದರೂ ಉಂಗುರ ನಿಮ್ಮ ನೆನಪಲ್ಲಿ, ಮಾತ್ರವಲ್ಲ, ಹಿರಿಯರಿಗೆ ನಮಸ್ಕರಿಸುವಾಗ ದೀರ್ಘ ಸುಮಂಗಲಿಯಾಗಿರು ಎಂದು ಹೇಳುವುದು ಕೂಡ ನಿಮ್ಮನ್ನು ಉದ್ದೇಶಿಸಿಯೇ. ಮಗು ನನ್ನದು, ರಕ್ತ ನನ್ನದು, ಹಾಲು ನನ್ನದೇ ಆಗಿದ್ದರೂ ನಿಮ್ಮ ಹೆಸರಿನಲ್ಲಿಯೇ ಮಗು ಬೆಳೆಯುತ್ತೆ.

ಹೀಗೆ ಎಲ್ಲವೂ ನಿಮ್ಮ ಹೆಸರಿನಲ್ಲಿಯೇ ಇರುವಾಗ ನಿಮ್ಮ ಬಳಿ ಏನಿದೆ ನನ್ನ ಹೆಸರಿನಲ್ಲಿ ಎಂದು ತಾಳ್ಮೆಯಿಂದ ಪ್ರಶ್ನಿಸುತ್ತಾರೆ. ಹೀಗೆ ಕೇಳಿರುವ ಮಾತುಗಳು ಎಷ್ಟು ಅರ್ಥಗರ್ಭಿತವಾಗಿವೆ ಅಲ್ಲವೇ..?

Leave a Reply

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...