alex Certify
ಕನ್ನಡ ದುನಿಯಾ       Mobile App
       

Kannada Duniya

ನಿಧಾನ ನಡಿಗೆ ನಿಮ್ಮದಾಗಿದ್ದರೆ ಎಚ್ಚರ..!

ನೀವು ಯಾವ ವೇಗದಲ್ಲಿ ನಡೆಯುತ್ತೀರಿ ಎಂಬುದನ್ನು ಎಂದಾದ್ರೂ ಗಮನಿಸಿದ್ದೀರಾ? ಉತ್ತರ ಇಲ್ಲ ಎಂದಾದ್ರೆ ಇಂದೇ ಗಮನ ನೀಡಿ. ನಿಮ್ಮ ನಡಿಗೆಯ ವೇಗಕ್ಕೂ ನಿಮ್ಮ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮ್ಮ ಚಲನೆ ಹೃದಯ ಸಂಬಂಧಿ ಖಾಯಿಲೆಗಳಿಗೆ ಮೂಲವಾಗಲಿದೆ.

ನಿಮ್ಮ ನಡಿಗೆ ನಿಧಾನವಾಗಿದ್ದರೆ ಹೃದಯ ರೋಗ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅಧ್ಯಯನವೊಂದು ಈ ವಿಷ್ಯವನ್ನು ಹೇಳಿದೆ. ವೇಗವಾಗಿ ನಡೆಯುವವರಿಗೆ ಹೋಲಿಸಿದ್ರೆ ನಿಧಾನವಾಗಿ ನಡೆಯುವವರಿಗೆ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಳ್ಳುವುದು ಎರಡು ಪಟ್ಟು ಹೆಚ್ಚಂತೆ. ಮಹಿಳೆ ಹಾಗೂ ಪುರುಷರಿಬ್ಬರಿಗೂ ಇದು ಅನ್ವಯಿಸುತ್ತದೆ ಎಂದು ಅಧ್ಯಯನ ಹೇಳಿದೆ.

ಲೀಸೆಸ್ಟರ್ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕ ಟಾಮ್ ಯೇಟ್ಸ್ ಪ್ರಕಾರ, ನಿಧಾನ, ಮಧ್ಯಮ ಹಾಗೂ ವೇಗವಾಗಿ ಚಲಿಸುವಿಕೆ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ, ಭವಿಷ್ಯದಲ್ಲಿ ಹೃದಯ ಸಂಬಂಧಿ ಖಾಯಿಲೆ ಅಥವಾ ಕ್ಯಾನ್ಸರ್ ಗೆ ಇದು ಕಾರಣವಾಗುತ್ತಾ ಎನ್ನುವ ಬಗ್ಗೆ ಸಂಶೋಧನೆ ನಡೆಸಲಾಗಿತ್ತಂತೆ.

ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಲ್ಲದ 4,20,727 ಜನರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. 6.3 ವರ್ಷಗಳವರೆಗೆ ಅಧ್ಯಯನ ನಡೆಸಲಾಯ್ತು. ಈ ಮಧ್ಯೆ 8,598 ಮಂದಿ ಸಾವನ್ನಪ್ಪಿದ್ದರು. ಇದ್ರಲ್ಲಿ 1,654 ಮಂದಿ ಹೃದಯ ಸಂಬಂಧಿ ಖಾಯಿಲೆಯಿಂದ ಸಾವನ್ನಪ್ಪಿದ್ದರೆ, 4,850 ಮಂದಿಗೆ ಕ್ಯಾನ್ಸರ್ ಕಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...