alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲು ನೋವಿನ ಹಿಂದಿರಬಹುದು ಭಯಾನಕ ಖಾಯಿಲೆಯ ಸೂಚನೆ..!

38 ವರ್ಷದ ಸಮೀರ್ ಸಿನ್ಹಾಗೆ ಪ್ರತಿ ದಿನ ವಾಕಿಂಗ್ ಹೋದಾಗ್ಲೂ ಕಾಲಿನ ಸ್ನಾಯುಗಳೆಲ್ಲ ವಿಪರೀತ ನೋಯುತ್ತಿದ್ವು. ವೇಗವಾಗಿ ನಡೆದಷ್ಟು ನೋವು ಹೆಚ್ಚಾಗುತ್ತಿತ್ತು. ಮೊದಮೊದಲು ಇದನ್ನು ಸಮೀರ್ ಗಂಭೀರವಾಗಿ ಪರಿಗಣಿಸಲೇ ಇಲ್ಲ.

ನಂತರ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಾಗ ಸಮೀರ್ ಬಾಹ್ಯ ಅಪಧಮನಿ ಖಾಯಿಲೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿತ್ತು. ಇದನ್ನು PAD ಅಂತಾ ಕರೆಯಲಾಗುತ್ತದೆ. ಊತವಿದ್ರೆ, ದುರ್ಬಲವಾಗಿದ್ದರೆ ಅಥವಾ ಬ್ಲಾಕ್ ಗಳಿದ್ರೆ ಕಾಲುಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇದನ್ನು ಲೆಗ್ ಅಟ್ಯಾಕ್ ಅಂತಾ ಕರೆಯಲಾಗುತ್ತದೆ. ಕಾಲುಗಳಲ್ಲಿ ಊತ, ಉರಿ ಕೂಡ ಕಾಣಿಸಿಕೊಳ್ಳಬಹುದು. ಅಷ್ಟೇ ಇಲ್ಲ PADಯಿಂದ ಗ್ಯಾಂಗ್ರಿನ್ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಮಧುಮೇಹ, ಹೃದಯದ ತೊಂದರೆ, ಹೈಪರ್ ಟೆನ್ಷನ್ ಇದ್ದಲ್ಲಿ ಅಥವಾ ಅತಿಯಾಗಿ ಧೂಮಪಾನ ಮಾಡುವವರಿಗೆ ಈ ಸಮಸ್ಯೆ ಉಂಟಾಗುತ್ತದೆ.

ಇದರಿಂದ ಪಾರಾಗಲು ಪ್ರತಿವರ್ಷ ಕಾಲುಗಳ ಪಲ್ಸ್ ಪರೀಕ್ಷೆ ಮಾಡಿಸಿಕೊಳ್ಳಿ. ABI ಎಂಬ ಟೆಸ್ಟ್ ಗೂ ಒಳಗಾಗಿ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಈ ಖಾಯಿಲೆಯಿಂದ ಪಾರಾಗಬಹುದು. ನಡೆದಾಡುವಾಗ ಅಥವಾ ಓಡುವಾಗ ಪಾದ, ತೊಡೆ ಮತ್ತು ಪೃಷ್ಠದ ಭಾಗದಲ್ಲಿ ಈ ರೀತಿ ನೋವು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...