alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಮತ್ತೆ ಬಳಸುವ ಪ್ಲಾಸ್ಟಿಕ್ ಬಾಟಲ್ ಟಾಯ್ಲೆಟ್ ಸೀಟ್ ಗೆ ಸಮ

plasticbottle-16-1471357016ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ತುಂಬಿಕೊಂಡು ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ? ಇಂತಹ ಬಾಟಲ್ ಗಳು ಕೀಟಾಣುಗಳ ನೆಲೆಯಾಗಿರುತ್ತವೆ. ಸರಿಯಾಗಿ ತೊಳೆಯದೇ ಬಳಸುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಟಾಯ್ಲೆಟ್ ನಲ್ಲಿ ಇರುವಷ್ಟೇ ಕೀಟಾಣುಗಳು ಇರುತ್ತವೆ ಎಂದು ಒಂದು ಸಂಶೋಧನೆ ಹೇಳಿದೆ.

ಟ್ರೆಡ್ ಮಿಲ್ ರಿವ್ಯೂಸ್ ಎಂಬ ಒಂದು ಸಂಸ್ಥೆ ಇದನ್ನು ಕಂಡುಹಿಡಿದಿದೆ. ಅವರು, ಒಬ್ಬ ಕ್ರೀಡಾಪಟು ಒಂದು ವಾರ ಬಳಸಿದ ನೀರಿನ ಬಾಟಲಿಯ ಪರೀಕ್ಷೆ ಮಾಡಿದಾಗ ಅದರ 1 ಸೆಂ.ಮೀ. ಏರಿಯಾದಲ್ಲಿ ಸುಮಾರು 90,000 ಕೀಟಾಣುಗಳು ನಿರ್ಮಿತವಾಗಿದ್ದವಂತೆ. ಅಂದರೆ ಒಂದು ಟಾಯ್ಲೆಟ್ ಸೀಟ್ ನಲ್ಲಿ ಎಷ್ಟು ಕೀಟಾಣುಗಳಿರುತ್ತವೋ ಅಷ್ಟು ಕೀಟಾಣುಗಳು ನೀರಿನ ಬಾಟಲಿಯಲ್ಲಿ ಕಾಣಿಸಿವೆ!

ವಿಜ್ಞಾನಿಗಳ ಪ್ರಕಾರ ಬಾಟಲಿಗಳಲ್ಲಿ ಇರುವ ಪ್ರತಿಶತ 60 ರಷ್ಟು ಕೀಟಾಣುಗಳು ರೋಗ ಹರಡುವಂತವುಗಳಾಗಿವೆ. ಇಂತಹ ಕೀಟಾಣುಗಳಿಂದ ಡಯೇರಿಯಾ, ಫುಡ್ ಪಾಯ್ಸನಿಂಗ್, ವಾಂತಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಮುಕ್ತರಾಗಲು ನೀವು ಅನುಸರಿಸಬೇಕಾದ ಕ್ರಮಗಳು ಹೀಗಿವೆ.

ಬಾಟಲಿಯನ್ನು ಪುನಃ ಪುನಃ ಬದಲಾಯಿಸುತ್ತಿರಬೇಕು.

ಬಾಟಲಿಯನ್ನು ಬದಲಾಯಿಸದೇ ಇದ್ದಲ್ಲಿ ಬಾಟಲಿಯನ್ನು ನೀರಿಗೆ ಹಾಕಿ ಕುದಿಸಿ.

ಬಾಟಲಿಯನ್ನು ಪ್ರತಿದಿನ ಬಿಸಿ ನೀರು ಮತ್ತು ಸಾಬೂನಿನಿಂದ ತೊಳೆಯಿರಿ.

ಸ್ಲೈಡ್ ಟಾಪ್ ಮುಚ್ಚಳವಿರುವ ಬಾಟಲಿಗಿಂತ ತೆರೆದ ಮುಚ್ಚಳವಿರುವ ಬಾಟಲಿ ಬಳಕೆ ಉತ್ತಮ.

ಪ್ಲಾಸ್ಟಿಕ್ ಬದಲು ಮೆಟಲ್ ಬಾಟಲಿಗಳನ್ನು ಉಪಯೋಗಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...