alex Certify
ಕನ್ನಡ ದುನಿಯಾ       Mobile App
       

Kannada Duniya

ಡಾಕ್ಟ್ರುಗಳಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಬರೀರಿ ಎಂದ ಜಾರ್ಖಂಡ್ ಸರ್ಕಾರ

ಅದೇನು ಬರೀತೀರೋ ನೆಟ್ಟಗೆ ಬರೀರಿ. ಕ್ಯಾಪಿಟಲ್ ಅಕ್ಷರಗಳಲ್ಲಿ, ಸ್ಪಷ್ಟವಾಗಿ ಅರ್ಥ ಆಗೋ ಹಾಗಿಲ್ಲ ನಿಮ್ಮ ಹ್ಯಾಂಡ್ ರೈಟಿಂಗ್.!’’ -ಸ್ಕೂಲಿನಲ್ಲಿ ಯಾರೋ ಹೈಸ್ಕೂಲ್ ಮೇಷ್ಟ್ರು ಮಕ್ಕಳಿಗೆ ಹೀಗೆ ಕ್ಲಾಸ್ ತೆಗೆದುಕೊಂಡಿರಬೇಕು ಎಂದು ನೀವಂದುಕೊಂಡಿದ್ದರೆ ಅದು ಶುದ್ಧ ತಪ್ಪು. ಜಾರ್ಖಂಡ್ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಂಗಳ ಡಾಕ್ಟರುಗಳಿಗೆ ಈ ತೆರನಾದ ಸೂಚನೆಯೊಂದನ್ನು ನೀಡಿದೆ.

ಈ ಬಗ್ಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿರುವ ಜಾರ್ಖಂಡ್ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿ ಅಖೌರಿ ಶಶಾಂಕ್ ಸಿನ್ಹಾ, ಈಗಾಗಲೇ ಹಲವಾರು ಬಾರಿ ಸೂಚನೆ ನೀಡಿದ್ದರೂ ಜಾರ್ಖಂಡ್ ವೈದ್ಯರು, ಇಂಡಿಯನ್ ಮೆಡಿಕಲ್ ಕೌನ್ಸಿಲ್ ನ ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ. ವೈದ್ಯರು ಔಷಧಿ ಚೀಟಿ(ಪ್ರಿಸ್ಕ್ರಿಪ್ಶನ್) ಬರೆಯುವಾಗ ಔಷಧಿಯ ಜನರಿಕ್ ಹೆಸರನ್ನು ಸ್ಪಷ್ಟವಾಗಿ ಕ್ಯಾಪಿಟಲ್ ಲೆಟರ್ ನಲ್ಲಿ ಬರೆಯಬೇಕೆಂಬುದು ನಿಯಮ.

ಆದರೆ ಯಾರೂ ಬರೆಯುತ್ತಿಲ್ಲ. ಕಳೆದೆರಡು ವರ್ಷಗಳಿಂದ ನಿರಂತರ ಸೂಚನೆಯ ಹೊರತಾಗಿಯೂ ವೈದ್ಯರು ಉದ್ಧಟತನ ತೋರಿದ್ದಾರೆ. ಇದೇ ರೀತಿ ಮುಂದುವರಿದರೆ, ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಜನರ ಮನಸ್ಸಿನಲ್ಲಿ ಇದ್ದದ್ದನ್ನೇ ಸರ್ಕಾರ ಹೇಳಿದೆ ಅಲ್ವಾ?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...