alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅತಿ ದೊಡ್ಡ ಬ್ರೈನ್ ಟ್ಯೂಮರ್ ಬೇರ್ಪಡಿಸಿದ ಮುಂಬೈ ವೈದ್ಯರು

ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉತ್ತರ ಪ್ರದೇಶ ಮೂಲದ 31 ವರ್ಷದ ಅಂಧ ಯುವಕನ ಮೆದುಳಿನಲ್ಲಿ ಬೆಳೆದಿದ್ದ ಭಾರೀ ಗಾತ್ರದ ಗಡ್ಡೆಯನ್ನು ವೈದ್ಯರು ಯಶಸ್ವಿಯಾಗಿ ತೆಗೆದು ಹಾಕಿದ್ದಾರೆ.

ಈ ಬ್ರೈನ್ ಟ್ಯೂಮರ್ 1.873 ಕೆಜಿ ತೂಕವಿತ್ತು. ಇಷ್ಟು ತೂಕದ ಬ್ರೈನ್ ಟ್ಯೂಮರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಿರುವುದು ಜಗತ್ತಿನಲ್ಲಿ ಇದೇ ಮೊದಲು. ಸಂತ್ ಲಾಲ್ ಪಾಲ್ ಎಂಬ ಯುವಕನಿಗೆ ಕಳೆದ 1 ವರ್ಷದಿಂದ ನಿರಂತರವಾಗಿ ತಲೆನೋವು ಬರುತ್ತಿತ್ತು.

ತಲೆ ಭಾರವಾಗಿ, ಊದಿಕೊಂಡಂತಾಗಿತ್ತು. ಇದರಿಂದಾಗಿಯೇ ಆತ ಎರಡೂ ಕಣ್ಣುಗಳನ್ನು ಸಹ ಕಳೆದುಕೊಂಡಿದ್ದ. ಮೆದುಳಿನಲ್ಲಿ ಭಾರೀ ಗಾತ್ರದ ಗಡ್ಡೆ ಬೆಳೆದಿದ್ದರಿಂದ ಒತ್ತಡ ಹೆಚ್ಚಾಗಿ ಅವನ ದೃಷ್ಟಿ ಹೋಗಿತ್ತು. ಎಂ ಆರ್ ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿದಾಗ ಮೆದುಳಲ್ಲಿ ಗಡ್ಡೆ ಬೆಳೆದಿರೋದು ಪತ್ತೆಯಾಗಿದೆ.

ಫೆಬ್ರವರಿ 14ರಂದು ವೈದ್ಯರು ಕ್ಲಿಷ್ಟಕರವಾದ ಆಪರೇಶನ್ ಅನ್ನು ಮಾಡಿದ್ದಾರೆ. ಸತತ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 1.8 ಕೆಜಿ ತೂಕದ ಗಡ್ಡೆಯನ್ನು ಮೆದುಳಿನಿಂದ ಬೇರ್ಪಡಿಸಿದ್ದಾರೆ. ಅದರಲ್ಲಿ ಕ್ಯಾನ್ಸರ್ ಕಣಗಳೇನಾದ್ರೂ ಇದೆಯಾ ಎಂಬುದನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...