alex Certify
ಕನ್ನಡ ದುನಿಯಾ       Mobile App
       

Kannada Duniya

ವೈನ್ ಅಥವಾ ಬಿಯರ್ ಕುಡಿಯುವವರು ಓದಲೇಬೇಕಾದ ಸುದ್ದಿ

ನೀವು ವೈನ್ ಅಥವಾ ಬಿಯರ್ ಕುಡಿಯುವವರಲ್ಲಿ ಒಬ್ಬರಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ವೈನ್ ಅಥವಾ ಬಿಯರ್ ಹೃದಯ ಸಂಬಂಧಿ ಖಾಯಿಲೆಗೆ ರಾಮಬಾಣವೆಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಹೃದಯ ಖಾಯಿಲೆಯಿಂದ ಸಂಭವಿಸಬಹುದಾದ ಅಕಾಲಿಕ ಮರಣವನ್ನು ತಪ್ಪಿಸುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಟೆಕ್ಸಾಸ್ ವಿಶ್ವವಿದ್ಯಾನಿಲಯ ಹಾಗೂ ಶಾಂಡೋಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಸಂಶೋಧಕರು 8 ವರ್ಷಗಳ ಕಾಲ 3,33,247 ಅಮೆರಿಕನ್ನರನ್ನು ಅಧ್ಯಯನ ನಡೆಸಿ ಈ ವರದಿ ನೀಡಿದ್ದಾರೆ.

ನಿಯಮಿತವಾಗಿ ಕಡಿಮೆ ಅನುಪಾತದಲ್ಲಿ ಬಿಯರ್ ಹಾಗೂ ವೈನ್ ಸೇವನೆ ಮಾಡುವುದು ಹೃದಯಕ್ಕೆ ಒಳ್ಳೆಯದು. ಇದನ್ನು ಕುಡಿಯುವುದ್ರಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಅಕಾಲಿಕ ಮರಣ ಹೊಂದುವ ಪ್ರಮಾಣ ಶೇಕಡಾ 22ರಷ್ಟು ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

ಯಾವ ಪದಾರ್ಥವನ್ನಾದ್ರೂ ಅತಿಯಾದ ಸೇವನೆ ಮಾಡುವುದು ಅಪಾಯ. ವೈನ್ ಹಾಗೂ ಬಿಯರ್ ಅತಿಯಾಗಿ ಸೇವನೆ ಮಾಡುವುದು ಕೂಡ ಅಪಾಯ. ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಒಳ್ಳೆಯದು ಎಂಬುದನ್ನು ಅರಿತು ವೈನ್ ಕುಡಿಯಬೇಕೆಂದು ಸಂಶೋಧಕರು ಹೇಳಿದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಕ್ಯಾನ್ಸರ್ ರೋಗ ಕಾಡುವ ಸಾಧ್ಯತೆ ಶೇಕಡಾ 27ರಷ್ಟಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...