alex Certify
ಕನ್ನಡ ದುನಿಯಾ       Mobile App
       

Kannada Duniya

ಲಿವರ್ ದಾನ ಮಾಡಿ ಪತಿಗೆ ಹೊಸ ಬದುಕು ನೀಡಿದ್ದಾಳೆ ಪತ್ನಿ

ಹೂವಿನ ಬೊಕೆ ಅಥವಾ ಉಡುಗೊರೆಗಳ ವಿನಿಮಯ ಮಾತ್ರ ಪ್ರೀತಿ ಅಲ್ಲ ಅನ್ನೋದನ್ನು ಪಶ್ಚಿಮ ಬಂಗಾಳದ ದಂಪತಿ ಸಾಬೀತು ಮಾಡಿದ್ದಾರೆ. ಪ್ರೀತಿಗೆ ಹೊಸ ಅರ್ಥವನ್ನೇ ಕೊಟ್ಟಿದ್ದಾರೆ ಈ ದಂಪತಿ. ಕಷ್ಟದಲ್ಲಿ ಪರಸ್ಪರ ಹೆಗಲಾಗುವುದೇ ನಿಜವಾದ ಪ್ರೇಮ ಅನ್ನೋದನ್ನು ರುಜುವಾತು ಮಾಡಿದ್ದಾರೆ.

ಸುಭಾಸ್ ಹಾಗೂ ಮಿಥು ಲಕ್ಷ್ಮಿಕಾಂತಾಪುರದ ನಿವಾಸಿಗಳು. 2015ರ ಜೂನ್ ನಲ್ಲಿ ಸುಭಾಸ್ ಗೆ ಲಿವರ್ ಸಮಸ್ಯೆ ಇರೋದಾಗಿ ವೈದ್ಯರು ತಿಳಿಸಿದ್ರು. ಲಿವರ್ ಕಸಿ ಮಾಡದಿದ್ರೆ ಆತ ಬದುಕುವುದೇ ಅನುಮಾನ ಅಂತಾ ಹೇಳಿದ್ದರು. ಶಸ್ತ್ರಚಿಕಿತ್ಸೆ ಕೂಡ ತುಂಬಾನೇ ಕ್ಲಿಷ್ಟಕರ ಎಂದಿದ್ದರು.

ಹೇಗಾದ್ರೂ ಪತಿಯನ್ನು ಉಳಿಸಿಕೊಳ್ಳಬೇಕೆಂದು ಪಣತೊಟ್ಟ ಮಿಥುಗೆ ಕೊನೆಗೂ ಒಬ್ಬ ದಾನಿ ದೊರೆತಿದ್ದಳು. ಆಕೆ ಬೇರೆ ಯಾರೂ ಅಲ್ಲ, ಅವಳೇ. ತನ್ನ ಲಿವರ್ ಅನ್ನೇ ಪತಿಗೆ ದಾನ ಮಾಡಲು ನಿರ್ಧರಿಸಿರೋದಾಗಿ ಮಿಥು ವೈದ್ಯರಿಗೆ ತಿಳಿಸಿದ್ಲು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆಕೆಯ ಲಿವರ್ ನ ಶೇ.60ರಷ್ಟು ಭಾಗವನ್ನು ಸುಭಾಸ್ ಗೆ ಕಸಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...