alex Certify ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ʼಉಪಾಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ʼಉಪಾಯ’

ವ್ಯಾಯಾಮ ಮಾಡಿ, ಜಿಮ್ ಗೆ ಹೋಗಿ ಆಹಾರ ಬಿಟ್ಟರೂ ತೂಕ ಮಾತ್ರ ಇಳಿದಿಲ್ಲ ಎನ್ನುವ ಚಿಂತೆ ಅನೇಕರನ್ನು ಕಾಡುತ್ತೆ. ಆಹಾರ ಸೇವನೆ ಕಡಿಮೆ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆಹಾರ ಸೇವನೆಯಲ್ಲಿ ಬದಲಾವಣೆ ತಂದಾಗ ಮಾತ್ರ ತೂಕ ಕಡಿಮೆಯಾಗಲು ಸಾಧ್ಯ ಎನ್ನುತ್ತಾರೆ ವೈದ್ಯರು.

ಒತ್ತಡದ ಲೈಫ್ ನಲ್ಲಿ ಪೋಷಕಾಂಶವುಳ್ಳ ಆಹಾರ ಸೇವನೆ ಮಾಡೋರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಸಮಯವಲ್ಲದ ಸಮಯದಲ್ಲಿ ಕೊಬ್ಬಿನಾಂಶ ಜಾಸ್ತಿ ಇರುವ ಆಹಾರವನ್ನು ಅನೇಕರು ಸೇವಿಸ್ತಾರೆ. ಇದರ ಬದಲು ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವನೆಯನ್ನು ನಿಯಮಿತವಾಗಿ ಮಾಡ್ತಾ ಬಂದ್ರೆ ತೂಕ ಕಡಿಮೆಯಾಗುವುದರಲ್ಲಿ ಎರಡು ಮಾತಿಲ್ಲ.

ಬೆಳಗಿನ ಉಪಹಾರವನ್ನು ಸರಿಯಾದ ಸಮಯಕ್ಕೆ ಸೇವನೆ ಮಾಡುವುದು ಒಳ್ಳೆಯದು. ರಾತ್ರಿ ಊಟ ಮಾಡಿ ಮಲಗಿದ ನಂತ್ರ 12 ಗಂಟೆಗೂ ಹೆಚ್ಚು ಕಾಲ ಹೊಟ್ಟೆ ಖಾಲಿ ಬಿಟ್ಟರೆ ದೇಹ ದಣಿಯಲು ಶುರುವಾಗುತ್ತದೆ. ಹಾಗಾಗಿ ಹಾಸಿಗೆಯಿಂದ ಎದ್ದ 2 ಗಂಟೆಯೊಳಗೆ ಉಪಹಾರ ಸೇವನೆ ಮಾಡಬೇಕು.

ಇನ್ನು ಮಧ್ಯಾಹ್ನದ ಊಟವನ್ನು ನಿಗದಿಯಂತೆ 12.45 ಕ್ಕೆ ಮಾಡಿ. ಉಪಹಾರ ಹಾಗೂ ಊಟದ ಮಧ್ಯೆ ನಾಲ್ಕರಿಂದ ಐದು ಗಂಟೆ ಮಾತ್ರ ಅಂತರವಿರಲಿ.

ರಾತ್ರಿ ಊಟವನ್ನು ಮಲಗುವ ಮೂರು ತಾಸು ಮೊದಲು ಮಾಡಬೇಕು. ರಾತ್ರಿ 7-8 ಗಂಟೆಯೊಳಗೆ ಊಟ ಮಾಡಿ. ಸಮಯದಲ್ಲಿ ಏರುಪೇರಾದಲ್ಲಿ ಸ್ವಲ್ಪ ಕಡಿಮೆ ಆಹಾರವನ್ನು ಸೇವಿಸಿ.

ಇದರ ಜೊತೆಗೆ ಹಗಲಿನಲ್ಲಿ ಆಗಾಗಾ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವನೆ ಮಾಡ್ತಾ ಇರಿ. ನೀರು ಕುಡಿಯುವುದನ್ನು ಮರೆಯಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...