alex Certify
ಕನ್ನಡ ದುನಿಯಾ       Mobile App
       

Kannada Duniya

ಹದಿಹರೆಯದಲ್ಲಿ ಅತಿಯಾಗಿ ಪೋರ್ನ್ ವೀಕ್ಷಿಸಿದ್ರೆ ಅಪಾಯ

boy-4455

ಟೆಕ್ನಾಲಜಿ ಮುಂದುವರಿದಿರೋದ್ರಿಂದ ಈಗ ಇಂಟರ್ನೆಟ್ ಎಲ್ಲರ ಬೆರಳ ತುದಿಯಲ್ಲೇ ಇದೆ. ಕಂಪ್ಯೂಟರ್, ಸ್ಮಾರ್ಟ್ ಫೋನ್ ಎಲ್ಲದರಲ್ಲೂ ಅಶ್ಲೀಲ ವಿಡಿಯೋಗಳದ್ದೇ ಹಾವಳಿ.

ಹದಿಹರೆಯದವರಿಗಂತೂ ಪೋರ್ನ್ ದೃಶ್ಯ ವೀಕ್ಷಣೆ ಚಟವಾಗಿಬಿಟ್ಟಿದೆ. ಅತಿಯಾಗಿ ಇಂತಹ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸುವುದರಿಂದ ಅವರ ವರ್ತನೆ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಅವರು ಲೈಂಗಿಕ ಹಿಂಸಾ ಪ್ರವೃತ್ತಿಗಿಳಿಯುವ ಸಾಧ್ಯತೆ ಹೆಚ್ಚು ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.

ಜೊತೆಗೆ ಅವರ ಮಾನಸಿಕ ಸ್ಥಿತಿ ಮೇಲೆ ಕೂಡ ಅದು ಪರಿಣಾಮ ಬೀರುತ್ತದೆ. ಸೂಕ್ತ ಲೈಂಗಿಕ ಶಿಕ್ಷಣದ ಮೂಲಕ ಅವರನ್ನು ಸರಿದಾರಿಗೆ ತರಬಹುದು. ಹಾಗಾಗಿ ಮಕ್ಕಳು ಹಾಗೂ ಹದಿಹರೆಯದವರು ಪೋರ್ನ್ ಸೈಟ್ ಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಉತ್ತಮ. ಬ್ರಿಟನ್ ಸರ್ಕಾರ, ಮಕ್ಕಳು ಹಾಗೂ ಹದಿಹರೆಯದವರಿಗೆ ಪೋರ್ನ್ ಸೈಟ್ ಗಳಿಗೆ ಆಕ್ಸೆಸ್ ದೊರೆಯದಂತೆ ಮಾಡಲು ಕ್ರಮ ಕೈಗೊಳ್ಳುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...