alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕ್ಯಾನ್ಸರ್ ಇದೆಯೆಂದು ತಪ್ಪು ವರದಿ, ಲ್ಯಾಬ್ ಗೆ 10 ಲಕ್ಷ ರೂ. ದಂಡ

ಡೆಹ್ರಾಡೂನ್ ಮೂಲದ ಪೆಥೊಲೊಜಿಕಲ್ ಲ್ಯಾಬೋರೆಟರಿ ಒಂದಕ್ಕೆ ಬಡ್ಡಿ ಸಮೇತ 10 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ಮಹಿಳೆಯೊಬ್ಬಳಿಗೆ ಸ್ತನ ಕ್ಯಾನ್ಸರ್ ಇದೆಯೆಂದು ತಪ್ಪಾಗಿ ವರದಿ ನೀಡಿದ್ದಕ್ಕಾಗಿ ಆಕೆಗೆ ಬಡ್ಡಿ ಸಮೇತ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಉತ್ತರಾಖಂಡ್ ನ ಗ್ರಾಹಕ ನಿವಾರಣಾ  ಆಯೋಗ ಸೂಚಿಸಿದೆ.

2003ರಲ್ಲಿ ಯಶೋಧಾ ಗೋಯಲ್ ಎಂಬ ಮಹಿಳೆಗೆ ಎಡಭಾಗದ ಸ್ತನದಲ್ಲಿ ನೋವು ಕಾಣಿಸಿಕೊಂಡಿತ್ತು. ವೈದ್ಯರು ಬಯಾಪ್ಸಿ ಮಾಡಿಸುವಂತೆ ಸೂಚಿಸಿದ್ದರು. ಯಶೋಧಾಗೆ ಬಯಾಪ್ಸಿ ಮಾಡಿದ್ದ ಅಹುಜಾ ಪೆಥೊಲಜಿ & ಇಮೇಜ್ ಸೆಂಟರ್, ಸ್ತನ ಕ್ಯಾನ್ಸರ್ ಇರುವುದಾಗಿ ವರದಿ ನೀಡಿತ್ತು.

ನಂತರ ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಇನ್ ಸ್ಟಿಟ್ಯೂಟ್ & ರಿಸರ್ಚ್ ಸೆಂಟರ್ ನಲ್ಲಿ ಯಶೋಧಾಳ ಎಡಭಾಗದ ಸ್ತನವನ್ನೇ ತೆಗೆದು ಹಾಕಲಾಯ್ತು. ನಂತರ ಬೇರೊಂದು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಆಕೆಗೆ ಕ್ಯಾನ್ಸರ್ ಇರಲೇ ಇಲ್ಲ ಅನ್ನೋದು ಬೆಳಕಿಗೆ ಬಂದಿತ್ತು.

2006ರಲ್ಲಿ ಯಶೋಧಾಳ ಮಗ, ತಪ್ಪಾಗಿ ವರದಿ ನೀಡಿದ ಲ್ಯಾಬ್ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಸ್ತನ ಕ್ಯಾನ್ಸರ್ ಎಂಬ ಸುಳ್ಳು ವರದಿಯಿಂದ ಮಹಿಳೆ ಅನುಭವಿಸಿರುವ ನೋವನ್ನು ಪರಿಗಣಿಸಿರುವ ಆಯೋಗ, 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.

ಕಾನೂನು ಹೋರಾಟಕ್ಕಾಗಿ ಆಕೆ ಖರ್ಚು ಮಾಡಿದ 10,000 ರೂಪಾಯಿ ಹಾಗೂ 10 ಲಕ್ಷ ರೂಪಾಯಿ ಜೊತೆಗೆ 2006ರಿಂದ ಇಲ್ಲಿಯವರೆಗಿನ ಬಡ್ಡಿ ಹಣವನ್ನೂ ನೀಡುವಂತೆ ಲ್ಯಾಬ್ ಮುಖ್ಯಸ್ಥ ಡಾ. ಅಲೋಕ್ ಅಹುಜಾ ಅವರಿಗೆ ಸೂಚನೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...