alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಶೇಕಡಾ 50 ಮಂದಿ ಬಳಸೋದಿಲ್ಲ ಬ್ರೆಷ್..!

24_07_2016-toothbrush

ಹಲ್ಲು ನೋವು ಈಗ ಯಾರಿಗಿಲ್ಲ ಹೇಳಿ. ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಕಾಡುವ ನೋವುಗಳಲ್ಲಿ ಈ ಹಲ್ಲು ನೋವು ಕೂಡ ಒಂದು. ಭಾರತ ದೇಶದಲ್ಲಿ ಶೇಕಡಾ 95 ರಷ್ಟು ಮಂದಿ ಈ ಹಲ್ಲು ನೋವಿನಿಂದ ಬಳಲುತ್ತಿದ್ದಾರಂತೆ. ಇಷ್ಟೇ ಅಲ್ಲ ಭಾರತೀಯ ಡೆಂಟಲ್ ಅಸೋಸಿಯೇಷನ್ ಇನ್ನೊಂದು ಆಶ್ಚರ್ಯಕರ ವಿಚಾರವನ್ನು ಹೊರಹಾಕಿದೆ.

ಭಾರತೀಯ ಡೆಂಟಲ್ ಅಸೋಸಿಯೇಷನ್ ಪ್ರಕಾರ, ದೇಶದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಂದಿ ಟೂತ್ ಬ್ರೆಷ್ ಉಪಯೋಗಿಸುವುದಿಲ್ಲವಂತೆ. ಐಡಿಎ ಮೂಲಕ ನಡೆದ ಅಧ್ಯಯನವೊಂದರಲ್ಲಿ ಈ ವಿಷಯ ತಿಳಿದು ಬಂದಿದೆ. ಭಾರತೀಯರಲ್ಲಿ ದಂತದ ಸಮಸ್ಯೆ ಜಾಸ್ತಿಯಿದೆ. ಶೇಕಡಾ 95ರಷ್ಟು ಮಂದಿ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಗೌತಮ್ ಶರ್ಮಾ ಹೇಳಿದ್ದಾರೆ.

ಭಾರತದ ಶೇಕಡಾ 50 ರಷ್ಟು ಮಂದಿ ಬ್ರೆಷ್ ಬಳಸುವುದಿಲ್ಲ ಎಂದ ಶರ್ಮಾ, 15 ವರ್ಷ ಕೆಳಗಿನ ಶೇಕಡಾ 75ರಷ್ಟು ಮಕ್ಕಳು ಕ್ಯಾವಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಪ್ಪಲ್ ಬಳಕೆಯಿಂದ ಕ್ಯಾವಿಟಿ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...