alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು ಒದ್ದ ರಭಸಕ್ಕೆ ಗರ್ಭಿಣಿಯ ಹೊಟ್ಟೆಯೊಳಗೆ ರಂಧ್ರ

ಮಗುವನ್ನು 9 ತಿಂಗಳುಗಳ ಕಾಲ ಹೊಟ್ಟೆಯಲ್ಲಿಟ್ಟುಕೊಳ್ಳೋದು ತಾಯಿಯ ಪಾಲಿಗೆ ನಿಜಕ್ಕೂ ಸವಾಲಿನ ಕೆಲಸ. ಹೆರಿಗೆ ಸಮಯದಲ್ಲಂತೂ ರಿಸ್ಕ್ ಇದ್ದಿದ್ದೇ. ಎಷ್ಟೋ ಬಾರಿ ತಾಯಿಯ ಪ್ರಾಣಕ್ಕೇ ಸಂಚಕಾರ ತರುವಂತಹ ಪ್ರಸಂಗಗಳು ಕೂಡ ಎದುರಾಗುತ್ತವೆ.

ಚೀನಾದಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಒದ್ದ ರಭಸಕ್ಕೆ ಆಕೆ ಸತ್ತೇ ಹೋಗುವಂತಾಗಿದ್ಲು. ಮಗು ಒದ್ದಿದ್ರಿಂದ ಆಕೆಗೆ ದಿಢೀರನೆ ರಕ್ತಸ್ರಾವ ಶುರುವಾಗಿತ್ತು. ಕೂಡಲೇ ಸಿಸೇರಿಯನ್ ಮೂಲಕ ವೈದ್ಯರು ಹೆರಿಗೆ ಮಾಡಿದ್ದಾರೆ. ಇನ್ಫೆಕ್ಷನ್ ನಿಂದಾಗಿ ಮಗುವಿನ ಜೀವಕ್ಕೂ ಅಪಾಯವಿತ್ತು.

ಝಾಂಗ್ ಎಂಬ ಮಹಿಳೆ 35 ವಾರಗಳ ಗರ್ಭಿಣಿಯಾಗಿದ್ಲು. ಆ ಸಮಯದಲ್ಲಿ ಹೊಟ್ಟೆಯಲ್ಲಿ ಮಗುವಿನ ಚಲನವಲನ, ಒದೆಯುವುದು ಇವೆಲ್ಲ ಸಾಮಾನ್ಯ. ಆದ್ರೆ ಝಾಂಗ್ ಗೆ ಮಾತ್ರ ವಿಪರೀತ ನೋವಾಗುತ್ತಿತ್ತು. ಆಕೆಯ ಉಸಿರಾಟ, ರಕ್ತದೊತ್ತಡವೂ ಏರುಪೇರಾಗಿತ್ತು.

ಅಲ್ಟ್ರಾಸೌಂಡ್ ಮೂಲಕ ಪರೀಕ್ಷಿಸಿದಾಗ ಮಗು ಒದ್ದ ರಭಸಕ್ಕೆ ಆಕೆಯ ಹೊಟ್ಟೆಯಲ್ಲಿ ರಂಧ್ರವಾಗಿಬಿಟ್ಟಿತ್ತು. ಕೂಡಲೇ ಅವಳನ್ನು ಆಪರೇಷನ್ ಥಿಯೇಟರ್ ಗೆ ರವಾನಿಸಿದ ವೈದ್ಯರು, ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆದಿದ್ದಾರೆ. ತಾಯಿ-ಮಗು ಇಬ್ಬರನ್ನೂ ಬಚಾವ್ ಮಾಡಿದ್ದಾರೆ. ಸ್ವಲ್ಪ ತಡವಾಗಿದ್ರೂ ಮಹಿಳೆಯ ಜೀವಕ್ಕೇ ಅಪಾಯವಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...