alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಇದೆ ಸೊಳ್ಳೆ ಓಡಿಸಲು ಸುಲಭ ಉಪಾಯ

health-food_1473339505

ಈಗ ಚಿಕನ್ ಗುನ್ಯಾ ಹಾಗೂ ಮಲೇರಿಯಾದ ಭೀತಿ ಹರಡಿದೆ. ಸೊಳ್ಳೆಗಳ ಭಯ ಶುರುವಾಗಿದೆ. ಮನೆಯಲ್ಲಿರುವ ಸೊಳ್ಳೆಗಳಿಂದ ಹೇಗಪ್ಪ ರಕ್ಷಣೆ ಪಡೆಯೋದು ಎಂಬ ಚಿಂತೆ ಕಾಡ್ತಾ ಇದೆ. ಈ ಬಗ್ಗೆ ಹೆಚ್ಚು ಯೋಚನೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ಸೊಳ್ಳೆಯನ್ನು ಓಡಿಸಬಹುದು.

ಬೇವಿನ ಎಲೆಯ ರಸವನ್ನು ತೆಗೆಯಿರಿ. ಅದಕ್ಕೆ ತೆಂಗಿನ ಎಣ್ಣೆಯನ್ನು ಸರಿ ಪ್ರಮಾಣದಲ್ಲಿ ಬೆರೆಸಿ. ಈ ಮಿಶ್ರಣವನ್ನು ಮೈಕೈಗೆ ಹಚ್ಚಿಕೊಳ್ಳಿ. ಬ್ಯಾಕ್ಟೀರಿಯಾ, ವೈರಸ್ ಗಳನ್ನು ಓಡಿಸುವ ಶಕ್ತಿ ಬೇವಿನ ರಸಕ್ಕಿದೆ. ಈ ಮಿಶ್ರಣದಿಂದ ವಾಸನೆಯೊಂದು ಬರುತ್ತದೆ. ಅದು ಸೊಳ್ಳೆಗಳನ್ನು ಎಂಟು ಗಂಟೆಗಳ ಕಾಲ ನಿಮ್ಮಿಂದ ದೂರವಿರಿಸುತ್ತದೆ.

ಕರ್ಪೂರಕ್ಕೂ ಸೊಳ್ಳೆ ಓಡಿಸುವ ಶಕ್ತಿ ಇದೆ. ಕೊಠಡಿಯಲ್ಲಿ ಒಂದು ಕರ್ಪೂರವನ್ನು ಹಚ್ಚಿಡಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಕರ್ಪೂರದ ವಾಸನೆಗೆ ಸೊಳ್ಳೆ ಕೊಠಡಿಯಿಂದ ಓಡಿ ಹೋಗಿರುತ್ತದೆ.

ತುಳಸಿ ಗಿಡವನ್ನು ಕಿಟಕಿಯ ಬಳಿ ಇಡಿ. ತುಳಸಿ ಸೊಳ್ಳೆಯನ್ನು ಓಡಿಸುತ್ತದೆ. ಮನೆಯೊಳಗೆ ಸೊಳ್ಳೆ ಪ್ರವೇಶ ಮಾಡಲು ಬಿಡುವುದಿಲ್ಲ. ನಿಂಬು ಗಿಡ ಕೂಡ ಸೊಳ್ಳೆ ಓಡಿಸುವ ಕೆಲಸ ಮಾಡುತ್ತದೆ.

ಬೆಳ್ಳುಳ್ಳಿ ವಾಸನೆ ಅಂದ್ರೆ ಸೊಳ್ಳೆಗಳಿಗೆ ಆಗುವುದಿಲ್ಲ. ಬೆಳ್ಳುಳ್ಳಿಯನ್ನು ನೀರಿಗೆ ಹಾಕಿ ಕುದಿಸಿ. ಆ ನೀರನ್ನು ಮನೆಗೆ ಸಿಂಪಡಿಸಿ. ನಿಮ್ಮ ಮೈಮೇಲೆ ಕೂಡ ಇದರ ಮಿಶ್ರಣವನ್ನು ಚಿಮುಕಿಸಿಕೊಳ್ಳಬಹುದು.

ನಿಂಬೆ ಹಣ್ಣಿನ ರಸಕ್ಕೆ ಎಣ್ಣೆಯನ್ನು ಬೆರೆಸಿ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಈ ಮಿಶ್ರಣ ಸೊಳ್ಳೆ ಓಡಿಸುವ ಜೊತೆಗೆ ನಂಜು ನಿರೋಧಕವಾಗಿಯೂ ಕೆಲಸ ಮಾಡುತ್ತದೆ.

ಪುದೀನಾ ಎಲೆಯ ವಾಸನೆಗೂ ಸೊಳ್ಳೆ ಹೆದರುತ್ತದೆ. ಹಾಗಾಗಿ ಪುದೀನಾ ಎಲೆಗಳನ್ನು ಮನೆಯಲ್ಲಿಡಿ. ಇಲ್ಲವೆ ಗಿಡವನ್ನು ಕಿಟಕಿ ಬಳಿ ಇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...