alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ತೆಗೆದುಕೊಳ್ಳುವ ಔಷಧಕ್ಕೆ ತಕ್ಕಂತಿರಲಿ ಆಹಾರದ ಪದ್ಧತಿ

ವೈದ್ಯರು ಹೇಳಿದಂತೆ ಮಾತ್ರೆಗಳ ಸೇವನೆ ಮಾಡಬೇಕು. ಖಾಲಿ ಹೊಟ್ಟೆಯಲ್ಲಿ ಬಹುತೇಕ ಔಷಧಿಗಳನ್ನು ಸೇವನೆ ಮಾಡಬಾರದು. ಇದು ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಮಾತ್ರೆ ಸೇವನೆಗೆ ಮೊದಲು ನೀವು ಯಾವ ಆಹಾರ ಸೇವನೆ ಮಾಡಿದ್ದೀರಿ ಎಂಬ ವಿಷ್ಯವೂ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಕೆಲವು ಕಾಯಿಲೆಗಳ ಔಷಧಿಗಳ ಸೇವನೆ ಮುನ್ನ ಅದಕ್ಕೆ ಸರಿ ಹೊಂದುವ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕು. ಹೀಗೆ ಮಾಡಿದ್ರೆ ಮಾತ್ರ ಹೊಟ್ಟೆ ಸೇರಿದ ಔಷಧಿ ಸರಿಯಾಗಿ ಪರಿಣಾಮ ಬೀರಲು ಸಾಧ್ಯ.

ಅಡುಗೆಗೆ ಬಳಸುವ ಚಕ್ಕೆ, ದೇಹದಲ್ಲಿ ಪೊಟ್ಯಾಸಿಯಮ್ ಕಡಿಮೆ ಮಾಡುತ್ತದೆ. ಇದು ಹೃದಯ ಕಾಯಿಲೆಯವರಿಗೆ ಅಪಾಯಕಾರಿ.  ಚಕ್ಕೆ ಹಾಗೂ ಔಷಧಿ ಎರಡೂ ಹೊಟ್ಟೆಗೆ ಹೋದಾಗ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟ  ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ಹೃದಯ ಸ್ಥಂಭನ ಅಥವಾ ಹೃದಯಾಘಾತದ ತೊಂದ್ರೆ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ  ಬ್ಲಡ್ ಪ್ರೆಶರ್ ಇರುವವರು ಚಕ್ಕೆಯಿಂದ ದೂರವಿರುವುದು ಲೇಸು.

ರಕ್ತದೊತ್ತಡ ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಬಾಳೆಹಣ್ಣುಗಳನ್ನು ತಿನ್ನಬೇಡಿ. ಬಾಳೆಹಣ್ಣು ಪೊಟಾಷಿಯಂ ಒಳಗೊಂಡಿರುತ್ತದೆ. ಇದು ಔಷಧವನ್ನು ಸೇರುವ ಮೂಲಕ ದೇಹದಲ್ಲಿ ಪೊಟಾಷಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚಿದ ಪೊಟಾಷಿಯಂ ಹೃದಯ ಬಡಿತವನ್ನು ಏರುಪೇರು ಮಾಡುತ್ತದೆ.

ಕೆಮ್ಮು ಅಥವಾ ಶೀತಕ್ಕೆ  ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ನಿಂಬೆ ಅಥವಾ ಕಿತ್ತಳೆಗಳಂತಹ ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ.

ನೋವು ನಿವಾರಕ ಮಾತ್ರೆ ಹಾಗೂ ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಮದ್ಯ ಸೇವಿಸಬೇಡಿ. ಈ ಔಷಧಿ ಮತ್ತು ಮದ್ಯದ ಕಾಂಬಿನೇಷನ್, ಲಿವರ್ ಮೇಲೆ ಹೆಚ್ಚಿನ ಒತ್ತಡ ಹಾಕುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...