alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೆಥಲೈಸರ್ ಟೆಸ್ಟ್ ಗೆ ಒಳಗಾಗುವ ಮುನ್ನ ನಿಗಾ ವಹಿಸಿ

test

ಈಗ ಎಲ್ಲಾ ಕಡೆ ನ್ಯೂ ಇಯರ್ ಪಾರ್ಟಿ ಜೋರಾಗಿ ನಡೀತಿದೆ. ಪಾರ್ಟಿ ಮುಗಿಸಿ ರಾತ್ರಿ ಮನೆಗೆ ವಾಪಸ್ಸಾಗುವಾಗ  ಸಾಮಾನ್ಯವಾಗಿ ಪೊಲೀಸರು ನಿಮ್ಮನ್ನ ಪರಿಶೀಲಿಸ್ತಾರೆ ನೀವು ಮದ್ಯಪಾನ ಮಾಡಿದ್ದೀರಾ ಅನ್ನೋದನ್ನು ಪತ್ತೆ ಮಾಡಲು ಬ್ರೆಥಲೈಸರ್ ಮೂಲಕ ನಿಮ್ಮ ಶ್ವಾಸ ಪರೀಕ್ಷೆ ನಡೆಸ್ತಾರೆ.

ಎಷ್ಟೋ ಜನ ಈಗಾಗ್ಲೇ ಬಳಸಿದ ಮೌತ್ ಪೀಸ್ ನಲ್ಲಿ ನೀವು ಗಾಳಿ ಊದಬೇಕು. ಇದ್ರಿಂದ ಎಷ್ಟೋ ಮಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ನಿಮ್ಮ ಉಸಿರು ಸೇರುತ್ತವೆ. ಈ ಪರೀಕ್ಷೆಯಿಂದ ಎಚ್ ಐ ವಿಯಂತಹ ಮಹಾಮಾರಿ ಕೂಡ ನಿಮ್ಮನ್ನು ಆವರಿಸಿಕೊಳ್ಳುವ ಸಾಧ್ಯತೆ ಇದೆ.

ಒಂದೇ ಮೌತ್ ಪೀಸನ್ನು ಎಲ್ಲರ ಪರೀಕ್ಷೆಗೂ ಪೊಲೀಸರು ಬಳಸೋದ್ರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಆದ್ರೆ ಇದುವರೆಗೂ ಈವರೆಗೂ ಯಾರೊಬ್ಬರೂ ಈ ಬಗ್ಗೆ ಸೊಲ್ಲೆತ್ತಿಲ್ಲ. ಜನರ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಶ್ವಾಸ ಪರೀಕ್ಷೆ ವೇಳೆ ಪೊಲೀಸರು ಕೊಂಚವೂ ಕಾಳಜಿ ವಹಿಸದೇ ಇರೋದು ಬಹಿರಂಗವಾಗಿದೆ.

ವಿಪರ್ಯಾಸ ಅಂದ್ರೆ ಶ್ವಾಸ ಪರೀಕ್ಷೆಗೆ ಒಳಗಾಗುವ ಬಹುತೇಕರಿಗೂ ಅದರಲ್ಲಿರುವ ಅಪಾಯದ ಸುಳಿವೇ ಇಲ್ಲ. ಲಾಲಾರಸ ಒಬ್ಬರಿಂದ ಒಬ್ಬರಿಗೆ ಹರಡಿದ್ರೆ ಅದು ತುಂಬಾ ಡೇಂಜರಸ್ ಎನ್ನುತ್ತಾರೆ ವೈದ್ಯರು. ಮೌತ್ ಪೀಸ್ ಬದಲಾಯಿಸದೆ ಪೊಲೀಸರು ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ ಅನ್ನೋದು ಅವರ ಅಭಿಪ್ರಾಯ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...