alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ಕಲಿಯಲು ನೆರವಾಗುತ್ತೆ ಈ ಆಪ್ಸ್

feature-1

ಉತ್ತಮ ಆರೋಗ್ಯ, ಸೌಂದರ್ಯ ವೃದ್ಧಿಗೆ ಯೋಗ ಬೆಸ್ಟ್. ಅಂತರಾಷ್ಟ್ರೀಯ ಯೋಗ ದಿನದಂದು ಯೋಗ ಕಲಿಯುವ ಇಚ್ಛೆ ಹೊಂದಿದ್ದರೆ ನಿಮಗೊಂದು ಗುಡ್ ನ್ಯೂಸ್. ಯೋಗ ಕಲಿಯಲು ಶಿಕ್ಷಕರಿಲ್ಲ ಎಂದು ಕೊರಗಬೇಕಾಗಿಲ್ಲ. ಮನೆಯಲ್ಲಿಯೇ ನೀವು ಸುಲಭವಾಗಿ ಯೋಗ ಕಲಿಯಬಹುದು. ಅದಕ್ಕೆ ನಿಮ್ಮ ಬಳಿ ಸ್ಮಾರ್ಟ್ಫೋನ್ ಇದ್ದರೆ ಸಾಕು.

ಹೌದು ಯೋಗಕ್ಕಾಗಿಯೇ ಕೆಲ ಆ್ಯಪ್ ನಿಮ್ಮ ಸೇವೆಗೆ ಸದಾ ಸಿದ್ಧವಿದೆ. ಆ ಆ್ಯಪ್ ಮೂಲಕ ನೀವು ಮನೆಯಲ್ಲಿಯೇ ಯೋಗ ಕಲಿಯಬಹುದು.

ಪಾಕೆಟ್ ಯೋಗ : ದೃಶ್ಯ ಹಾಗೂ ಧ್ವನಿ ಮೂಲಕ ನಿಮಗೆ ಯೋಗದ ಬಗ್ಗೆ ಮಾಹಿತಿ ಸಿಗಲಿದೆ. ಬೇರೆ ಬೇರೆ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು 200 ಯೋಗಾಸನ ಹಾಗೂ 27 ಪ್ರೋಗ್ರಾಂ ಈ ಆ್ಯಪ್ ನಲ್ಲಿ ನಿಮಗೆ ಸಿಗಲಿದೆ. ಇದ್ರ ಸಹಾಯದಿಂದ ನೀವು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ನೀವು ಎಷ್ಟು ಕ್ಯಾಲರಿ ಬರ್ನ್ ಮಾಡ್ತಿದ್ದೀರಾ ಎಂಬ ಮಾಹಿತಿಯನ್ನೂ ಇದು ನೀಡಲಿದೆ.

ರಾಮ್ದೇವ್ ಯೋಗಾ 2 : ರಾಮ್ದೇವ್ ಯೋಗ 2 ಅಪ್ಲಿಕೇಷನ್ ನಲ್ಲಿ ಪ್ರಾಣಾಯಾಮ ಸೇರಿದಂತೆ ಅನೇಕ ಆಸನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಯೋಗದಿಂದಾಗುವ ಲಾಭದ ಬಗ್ಗೆಯೂ ಈ ಆ್ಯಪ್ ನಲ್ಲಿ ಮಾಹಿತಿ ಇದೆ. ಯಾವ ರೋಗಕ್ಕೆ ಯಾವ ಯೋಗ ಮಾಡಬೇಕೆಂಬ ಬಗ್ಗೆಯೂ ಇದ್ರಲ್ಲಿ ತಿಳಿಸಲಾಗಿದೆ.

ಪ್ರಾಣಾಯಾಮ : ಇದ್ರಲ್ಲಿ ಎರಡು ಧ್ಯಾನದ ಬಗ್ಗೆ ಹೇಳಲಾಗಿದೆ. ಏನಿಮೇಷನ್ ಹಾಗೂ ಮ್ಯೂಜಿಕ್ ಮೂಲಕ ಬಳಕೆದಾರರಿಗೆ ಮಾಹಿತಿ ನೀಡಲಾಗುತ್ತದೆ. ಬಳಕೆದಾರರು ತಮ್ಮ ಒತ್ತಡ ಕಡಿಮೆ ಮಾಡಿಕೊಂಡು ಖುಷಿಯಾಗಿರಲು ಈ ಆ್ಯಪ್ ಸಹಕಾರಿ.

ಆಫೀಸ್ ಯೋಗಾ: ಕಚೇರಿಯಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್ ಸಿದ್ಧಪಡಿಸಲಾಗಿದೆ. ಸಮಯ ಸಿಗದೆ ಇರುವವರು ಈ ಆ್ಯಪ್ ಬಳಸಬಹುದು. ಕಚೇರಿಯಲ್ಲಿನ ಒತ್ತಡ ಕಡಿಮೆ ಮಾಡಿಕೊಳ್ಳುವ ಆಸನ ಹಾಗೂ ಪ್ರಾಣಾಯಾಮದ ಬಗ್ಗೆ ಮಾಹಿತಿ ನೀಡುತ್ತದೆ. ಈ ಆ್ಯಪ್ ಕೇವಲ ಐಫೋನ್ ನಲ್ಲಿ ಮಾತ್ರ ಸಿಗಲಿದೆ.

ಡೇಲಿ ಯೋಗ: ಈ ಅಪ್ಲಿಕೇಷನ್ ನಲ್ಲಿ 50ಕ್ಕೂ ಹೆಚ್ಚು ಯೋಗ ಕ್ಲಾಸ್ ಸಿಗಲಿದೆ. 400ಕ್ಕೂ ಹೆಚ್ಚು ವ್ಯಾಯಾಮ ಇದ್ರಲ್ಲಿದೆ. ತಜ್ಞರಿಂದ ನೀವು ಸೂಕ್ತ ಸಲಹೆಯನ್ನು ಪಡೆಯಬಹುದಾಗಿದೆ. ಜೊತೆಗೆ ಹೆಚ್ ಡಿ ವಿಡಿಯೋ ಮೂಲಕ ಯೋಗವನ್ನು ವೀಕ್ಷಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...