alex Certify
ಕನ್ನಡ ದುನಿಯಾ       Mobile App
       

Kannada Duniya

ನೈಲಾನ್ ಹಗ್ಗ ಬಳಸಿ ಬಾಲಕಿಗೆ ವಿಶಿಷ್ಟ ಶಸ್ತ್ರಚಿಕಿತ್ಸೆ

rope

ವೈದ್ಯಕೀಯ ಲೋಕದಲ್ಲಿ ನಮ್ಮ ಊಹೆಯನ್ನೂ ಮೀರಿದ ಕೆಲವೊಂದು ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ತೀರಾ ಅಪರೂಪದ ಖಾಯಿಲೆಯಿಂದ ಬಳಲುವ ರೋಗಿಗಳಿಗೆ ಹೊಸ ಬದುಕು ನೀಡುತ್ತವೆ. ಇತ್ತೀಚೆಗಷ್ಟೆ ಲಂಡನ್ ನಲ್ಲಿ 14 ವರ್ಷದ ಬಾಲಕಿಗೆ ಹಗ್ಗವನ್ನು ಬಳಸಿ ವಿಶಿಷ್ಟ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಎಲ್ಲಾ ಟೊಮ್ಲಿನ್ಸನ್ ಎಂಬ ಬಾಲಕಿಗೆ ಬೆನ್ನು ಮೂಳೆ ಅಂಕುಡೊಂಕಾಗಿತ್ತು. ಇದರಿಂದಾಗಿ ಆಟ, ಪಾಠ ಸೇರಿದಂತೆ ಯಾವ ಚಟುವಟಿಕೆಯನ್ನೂ ಮಾಡಲು ಸಾಧ್ಯವಾಗ್ತಿರಲಿಲ್ಲ. ನೈಲಾನ್ ಹಗ್ಗವೊಂದನ್ನು ಬಳಸಿ ಆಕೆಯ ಬೆನ್ನೆಲುಬನ್ನು ನೇರ ಮಾಡಲಾಗಿದೆ. ಈ ಆಪರೇಷನ್ ಗೆ ವರ್ಟೆಬ್ರಲ್ ಬಾಡಿ ಟ್ಯಾದರಿಂಗ್ ಅಂತಾ ಕರೆಯಲಾಗುತ್ತದೆ.

ಬೆನ್ನೆಲುಬಿನ ಪ್ರತಿ ಸೆಕ್ಷನ್ ಗೂ ಸ್ಕ್ರೂ ಅಳವಡಿಸಲಾಗಿದ್ದು, ಇನ್ಮೇಲೆ ಬಾಲಕಿ ಆರಾಮಾಗಿ ಆಟವಾಡಬಹುದು ಅಂತಾ ವೈದ್ಯರು ತಿಳಿಸಿದ್ದಾರೆ. ಸುಮಾರು ಒಂದು ಕೋಟಿ ಜನರಲ್ಲಿ ಒಬ್ಬರಿಗೆ ಈ ಅಪರೂಪದ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಚಿಕಿತ್ಸೆಗೆ ಕೂಡ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕಿ ಅತಿ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ ಅಂತಾ ವೈದ್ಯರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...