alex Certify
ಕನ್ನಡ ದುನಿಯಾ       Mobile App
       

Kannada Duniya

ಬೃಹತ್ ಗಾತ್ರದ ನಾಲಿಗೆ ಹೊಂದಿದ್ದ ಮಗು ಬಚಾವ್

tongue

ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಗತಾನೆ ಜನಿಸಿದ ಮಗುವಿಗೆ ಬೃಹತ್ ಗಾತ್ರದ ನಾಲಿಗೆಯಿತ್ತು. ಹೆಣ್ಣು ಮಗು ಬದುಕುವುದೇ ಕಷ್ಟವಾಗಿಬಿಟ್ಟಿತ್ತು. ಮಗುವಿಗೆ ಕಠಿಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಅದನ್ನು ಬದುಕಿಸಿದ್ದಾರೆ. ಈ ರೀತಿ ದೊಡ್ಡ ನಾಲಗೆ ಹೊಂದಿರುವುದು ವಿರಳಾತಿವಿರಳ ಖಾಯಿಲೆ, ಇದನ್ನು ಮ್ಯಾಕ್ರೋಗ್ಲೋಸಿಯಾ ಅಂತಾ ಕರೆಯುತ್ತಾರೆ.

ನಾಲಿಗೆ ಮತ್ತೂ ಊದಿಕೊಳ್ತಾ ಇದ್ದಿದ್ರಿಂದ ಹೆಣ್ಣು ಮಗು ಅಪರಾಜಿತ್ ಲೋಧಿ ಸಾವಿನಂಚಿಗೆ ತಲುಪಿತ್ತು. ಹಾಲು ಕುಡಿಯಲು ಸಹ ಸಾಧ್ಯವಾಗ್ತಾ ಇರಲಿಲ್ಲ, ನೋವಿನಿಂದ ಕಂದಮ್ಮ ಒದ್ದಾಡ್ತಾ ಇದ್ರೆ, ಪೋಷಕರು ಅಸಹಾಯಕರಾಗಿದ್ರು. ನಾಲ್ಕು ದಿನಗಳ ಕಾಲ ಮಗುವನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು, ನಂತರ ವೈದ್ಯರು ಆಕೆಗೆ ಆಪರೇಷನ್ ಮಾಡಿದ್ದಾರೆ.

2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ನಾಲಿಗೆಯಲ್ಲಿದ್ದ  ಗಡ್ಡೆಯನ್ನು ತೆಗೆದಿದ್ದಾರೆ. ಆಪರೇಷನ್ ಮಾಡಿ ಮಗುವಿನ ನಾಲಗೆಯ ಗಾತ್ರವನ್ನು ಕಡಿಮೆ ಮಾಡಿದ್ದು, ಈಗ ಆರಾಮಾಗಿ ಹಾಲು ಕುಡಿಯಲು ಸಾಧ್ಯವಾಗುತ್ತಿದೆ. ನಾಲ್ಕು ದಿನಗಳ ನಂತರ ಮಗುವಿಗೆ ಮರುಜೀವ ಸಿಕ್ಕಿದ್ದು, ಹೆತ್ತವರು ನಿರಾಳರಾಗಿದ್ದಾರೆ. ಮಿನಿ ಲೋಧಿ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...