alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನೊಬ್ಬ ಚಿಕಿತ್ಸೆಗೆ ಬಂದ ವೇಳೆ ಎಂಡೋಸ್ಕೋಪಿ ಮಾಡಿದ ವೈದ್ಯರು ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಹೊಟ್ಟೆಯಲ್ಲಿದ್ದ ವಸ್ತು ಕಂಡು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಬಾಲಕನ ಹೊಟ್ಟೆಯಲ್ಲಿ ಸುಮಾರು 2 ಪೌಂಡ್ ನಷ್ಟು ಮರದ ಪುಡಿ ಹಾಗೂ ಪ್ಲಾಸ್ಟಿಕ್ ಇದ್ದು, ಈಗ ಅದನ್ನು ಹೊರ ತೆಗೆಯಲಾಗಿದೆ.

ಪಂಜಾಬ್ ನ ಬಟಿಂಡಾದಲ್ಲಿ ಈ ಘಟನೆ ನಡೆದಿದ್ದು, ರೈತ ಗುರ್ಮಿತ್ ಸಾ ಎಂಬವರ ಪುತ್ರ ಅರ್ಜುನ್ ಸಾ ಚಿಕ್ಕಂದಿನಿಂದಲೂ ಪ್ಲಾಸ್ಟಿಕ್ ತಿನ್ನುವ ಚಟ ರೂಢಿಸಿಕೊಂಡಿದ್ದನೆನ್ನಲಾಗಿದೆ. ಪೋಷಕರು ಅದಷ್ಟೂ ಇದಕ್ಕೆ ಕಡಿವಾಣ ಹಾಕಲು ಯತ್ನಿಸಿದ್ದು, ಆದರೆ ದೊಡ್ಡವನಾದ ಮೇಲೂ ಕದ್ದು ಮುಚ್ಚಿ ಮರದ ತಿರುಳು ಹಾಗೂ ಪ್ಲಾಸ್ಟಿಕ್ ತಿನ್ನುವ ಹವ್ಯಾಸವನ್ನು ಅರ್ಜುನ್ ಹೊಂದಿದ್ದನೆನ್ನಲಾಗಿದೆ.

16 ವರ್ಷದ ಅರ್ಜುನ್ ಸಾ ಕೆಲ ತಿಂಗಳಿನಿಂದ ಭಾರೀ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಆತನನ್ನು ಹಲವು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಉಸಿರಾಟ ಸಮಸ್ಯೆ ಅನುಭವಿಸುವುದರ ಜೊತೆಗೆ ಅರ್ಜುನ್ ಆಹಾರವನ್ನೇ ಸೇವಿಸುತ್ತಿರಲಿಲ್ಲವೆನ್ನಲಾಗಿದೆ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಬಟಿಂಡಾ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು 2 ಬಾರಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ 2 ಪೌಂಡ್ ನಷ್ಟು ಮರದ ತಿರುಳು ಹಾಗೂ ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ. ಇದೀಗ ಅರ್ಜುನ್ ಸಾ ಚೇತರಿಸಿಕೊಳ್ಳುತ್ತಿದ್ದಾನೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...