alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಫಾಸ್ಟ್ ಡಯಟ್ ಅಂದ್ರೇನು ಗೊತ್ತಾ…?

ಸಿಡ್ನಿ ಮೂಲದ ಉದ್ಯಮಿ 57 ವರ್ಷ ವಯಸ್ಸಿನ ಜೆನೆವಿವ್ ಡೇವಿಡ್ಸನ್ ಎಂಬುವವರು ಸೂಪರ್ ಫಾಸ್ಟ್ ಡಯಟ್ ಮಾಡಿ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಹಾಗಿದ್ರೆ ಏನಿದು ಸೂಪರ್ ಫಾಸ್ಟ್ ಡಯಟ್, ಇದನ್ನು ಹೇಗೆ ಮಾಡ್ತಾರೆ? ಉಪಯೋಗವೇನು ಅನ್ನೋದನ್ನು ನೋಡೋಣ.

ಈ ಸೂಪರ್ ಫಾಸ್ಟ್ ಡಯಟ್ ಮೂರು ವಿಧಗಳಿರುತ್ತವೆ.

5:2 – ಈ ವಿಧಾನದಲ್ಲಿ ವಾರದ ಎರಡು ದಿನ ಕೇವಲ 500-600 ಕ್ಯಾಲೋರಿಗಳಷ್ಟನ್ನೇ ತಿನ್ನಬಹುದು. ಉಳಿದ ದಿನಗಳಲ್ಲಿ ಮಾಮೂಲಿಯಂತೆ ಊಟ ತಿಂಡಿ ಮಾಡಬಹುದು.

ಈಟ್ –ಸ್ಟಾಪ್ –ಈಟ್: ಈ ವಿಧಾನದಲ್ಲಿ ವಾರದಲ್ಲಿ ಒಂದು ಅಥವಾ ಎರಡು ದಿನ ಉಪವಾಸ ಮಾಡಿ ಉಳಿದ ದಿನಗಳಲ್ಲಿ ತಿನ್ನಬಹುದು.

16/8 : ಈ ವಿಧಾನದಲ್ಲಿ ಪ್ರತಿದಿನವೂ ಬೆಳಗಿನ ತಿಂಡಿಯನ್ನು ತ್ಯಜಿಸಬೇಕಾಗುತ್ತದೆ. ಉಳಿದ 8 ಗಂಟೆಗಳ ಅವಧಿಯಲ್ಲಿ ನೀವು ಆಹಾರ ತೆಗೆದುಕೊಳ್ಳಬಹುದು. ನಂತರ ತೆಗೆದುಕೊಳ್ಳಬಾರದು.

ಉಪವಾಸ ಮಾಡೋದ್ರಿಂದ ಸೊಂಟದ ಸುತ್ತ ಶೇಖರಣೆಯಾದ ಕೊಬ್ಬು ಕರಗುತ್ತದೆ. ನಿಮ್ಮನ್ನು ದೀರ್ಘಾಯುಷಿಯನ್ನಾಗಿಸುತ್ತದೆ. ಆದರೆ ಸಕ್ಕರೆ ಖಾಯಿಲೆಯುಳ್ಳವರು ಈ ಉಪವಾಸ ಕ್ರಮದಿಂದ ದೂರವಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...