alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆ ಶುರುವಾಗ್ತಾ ಇದೆ. ಆರಂಭದಲ್ಲೇ ಸೂರ್ಯನ ಧಗೆಗೆ ಜನ ತತ್ತರಿಸುತ್ತಿದ್ದಾರೆ. ಮುಂದೇನಪ್ಪಾ ಎಂಬ ಚಿಂತೆ ಜನರನ್ನು ಕಾಡ್ತಾ ಇದೆ.

ಬೇಸಿಗೆಯಲ್ಲಿ ನಾನಾ ಖಾಯಿಲೆಗಳು ಕಾಣಿಸಿಕೊಳ್ಳುವುದು ಕಾಮನ್. ಭೇದಿ, ಜ್ವರ, ದಡಾರ, ನಿರ್ಜಲೀಕರಣ, ಹೆಪಟೈಟಿಸ್, ಟೈಫಾಯಿಡ್, ಕಾಲರಾ, ಬೊಕ್ಕೆ, ಸನ್ ಸ್ಟ್ರೋಕ್ ನಂತ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇವೆಲ್ಲವುಗಳಿಂದ ದೂರ ಇರಲು ಉತ್ತಮ ಆಹಾರ ಸೇವನೆ ಅತ್ಯಗತ್ಯ.

ಪ್ರತಿದಿನ ಮೂರದಿಂದ ನಾಲ್ಕು ಲೀಟರ್ ನೀರನ್ನು ಪ್ರತಿಯೊಬ್ಬರೂ ಸೇವಿಸಲೇಬೇಕು.

ಎಳನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಅತ್ಯಾವಶ್ಯಕ.

ವಿಟಮಿನ್ ಸಿ ಇರುವ ಒಂದು ಹಣ್ಣನ್ನು ಪ್ರತಿದಿನ ತಿನ್ನಬೇಕು. ಕಿತ್ತಳೆ, ನಿಂಬೆ, ಅನಾನಸ್, ಕಲ್ಲಂಗಡಿ, ಪಪ್ಪಾಯಿ ಮತ್ತು ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಇರುತ್ತದೆ.

ನಾರಿನಂಶ ಇರುವ ಆಹಾರ ಸೇವನೆ ಬಹಳ ಉತ್ತಮ. ಪಾಲಕ, ಎಲೆಕೋಸು ಮತ್ತು ಕ್ಯಾಪ್ಸಿಕಂ ರೀತಿಯ ಹಸಿರು ಮತ್ತು ನಾರಿರುವ ತರಕಾರಿ ಸೇವನೆ ಮಾಡಿ.

ಗ್ರೀನ್ ಟೀ ಸೇವನೆ ಕೂಡ ಆರೋಗ್ಯಕ್ಕೆ ಒಳ್ಳೆಯದು.

ಜಂಕ್, ಮಸಾಲೆ ಆಹಾರ, ಮದ್ಯ ಸೇವನೆ, ಕೊಬ್ಬಿರುವ ಆಹಾರ, ಸಕ್ಕರೆ ಜಾಸ್ತಿ ಇರುವ ಆಹಾರ ಮತ್ತು ಸಿಗರೇಟ್ ನಿಂದ ಆದಷ್ಟು ದೂರ ಇರಿ.

ಸೋಡಾ ಇರುವ ಕೃತಕ ತಂಪು ಪಾನೀಯ ಬೇಡವೇ ಬೇಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...