alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿಯಾದ್ರೆ ಹಾಲು ವಿಷ…! ಎಚ್ಚರ

milk_1471768733

ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರುಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಸಂಶೋಧನೆಯೊಂದು ಜಾಸ್ತಿ ಹಾಲು ಕುಡಿಯುವವರು ಆತಂಕಪಡುವಂತಹ ವಿಷಯವೊಂದನ್ನು ಹೊರಹಾಕಿದೆ.

ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿದ್ರೆ ಮೂಳೆಗಳು ದುರ್ಬಲವಾಗುತ್ತದೆಯಂತೆ. ಹೆಚ್ಚು ಹಾಲು ಕುಡಿಯುವ ಜನರು ಬಹುಬೇಗ ಸಾವನ್ನಪ್ಪುತ್ತಾರಂತೆ. 20 ವರ್ಷಗಳ ಕಾಲ 61 ಸಾವಿರ ಮಹಿಳೆಯರು ಹಾಗೂ 45 ಸಾವಿರ ಪುರುಷರ ಮೇಲೆ ಈ ಪ್ರಯೋಗ ಮಾಡಿ ವರದಿ ಸಿದ್ಧಪಡಿಸಲಾಗಿದೆ.

ಡೈರಿ ಉತ್ಪನ್ನಗಳನ್ನು ಬಳಸುವ ವ್ಯಕ್ತಿಯಲ್ಲಿ ಮೂಳೆ ಸಮಸ್ಯೆ ಹೆಚ್ಚಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಲು ಕುಡಿಯುವ ಮಹಿಳೆ ಮೂಳೆ ಮುರಿತಕ್ಕೊಳಗಾಗುವ ಪ್ರಮಾಣ ಜಾಸ್ತಿ ಎಂದಿದೆ ಅಧ್ಯಯನ. ದಿನದಲ್ಲಿ ಮೂರು ಬಾರಿ ಹಾಲು ಕುಡಿಯುವವರು ಬೇಗ ಸಾಯ್ತಾರಂತೆ. ಹಾಗೆ ದಿನಕ್ಕೆ ಒಂದು ಬಾರಿ ಹಾಲು ಕುಡಿಯುವ ವ್ಯಕ್ತಿಗಳು ಆರೋಗ್ಯವಾಗಿರ್ತಾರಂತೆ. ಅಂದ್ರೆ ಹಾಲಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶವಿದೆ. ಆದ್ರೆ ಅತಿಯಾದ್ರೆ ಅಮೃತವೂ ವಿಷ ಎನ್ನುತ್ತಿದೆ ಅಧ್ಯಯನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...