alex Certify
ಕನ್ನಡ ದುನಿಯಾ       Mobile App
       

Kannada Duniya

30 ನಿಮಿಷದಲ್ಲಿ ಕ್ಯಾನ್ಸರ್ ಪತ್ತೆಗೆ ಹೊಸ ತಂತ್ರಜ್ಞಾನ

Soon, detect cancer in less than 30 minutesಕೊಚ್ಚಿ ಮೂಲದ ಅಮೃತಾ ಯೂನಿವರ್ಸಿಟಿಯ ಶಾಂತಕುಮಾರ್ ವಿ.ನಾಯರ್ ಮತ್ತು ಮಂಝೂರ್ ಕೋಯಕುಟ್ಟಿ 4 ವರ್ಷಗಳ ಹಿಂದೆ ರಾಮನ್ ಸ್ಪೆಕ್ಟ್ರೋಸ್ಕೋಪಿ ಬಳಸಿ ಲೇಸರ್ ಮೂಲಕ ಆಹಾರದಲ್ಲಿರುವ ಮಾಲಿನ್ಯಕಾರಕಗಳನ್ನು ಪತ್ತೆ ಮಾಡುತ್ತಿದ್ರು.

ಆಗ ಕ್ಯಾನ್ಸರ್ ಕೋಶಗಳ ಪತ್ತೆಗೆ ಸಹ ಮಾನವನ ಅಂಗಾಶದಲ್ಲಿ ಲೇಸರ್ ಗಳನ್ಯಾಕೆ ಬೌನ್ಸ್ ಮಾಡಬಾರದು ಎಂಬ ಆಲೋಚನೆ ಅವರಿಗೆ ಹೊಳೆದಿತ್ತು. ಅದರ ಪರಿಣಾಮವೇ ಈ ಹೊಸ ಆವಿಷ್ಕಾರ. ಆಸ್ಪತ್ರೆಗೂ ಹೋಗದೆ ಕೇವಲ 30 ನಿಮಿಷಗಳೊಳಗೆ ಬಾಯಿ ಕ್ಯಾನ್ಸರ್ ಪತ್ತೆ ಮಾಡಬಹುದಾದ ತಂತ್ರಜ್ಞಾನ. ಇನ್ನೆರಡು ವರ್ಷಗಳಲ್ಲಿ ಈ ಪ್ರಯೋಗ ಸಂಪೂರ್ಣ ಯಶಸ್ವಿಯಾಗಲಿದೆ ಅನ್ನೋ ವಿಶ್ವಾಸ ನಾಯರ್ ಅವರದ್ದು.

ಈ ಪ್ರಯೋಗಕ್ಕಾಗಿ ಅವರಿಗೆ ಜೈವಿಕ ತಂತ್ರಜ್ಞಾನ ಇಲಾಖೆ 60 ಲಕ್ಷ ರೂಪಾಯಿ ನೆರವು ನೀಡಿದೆ. ಕ್ಯಾನ್ಸರ್ ಪತ್ತೆ ತಂತ್ರಜ್ಞಾನದಲ್ಲಿ ಕ್ಯಾನ್ಸರ್ ಗೂ ಪೂರ್ವ ಮತ್ತು ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಪತ್ತೆ ಮಾಡಲು ನ್ಯಾನೋ ಸಹಿತ ಲೇಸರ್ ಬಳಸಲಾಗುತ್ತದೆ. ಜೀವಕೋಶಗಳ ಲಕ್ಷಣ ಪತ್ತೆಗೆ ಲೇಸರ್ ಬಳಕೆ ಹೊಸದೇನಲ್ಲ, ಆದ್ರೆ ಅವು ನೀಡುವ ಸಂಕೇತಗಳು ದುರ್ಬಲವಾಗಿರುತ್ತಿದ್ದವು, ಅವುಗಳನ್ನು ವಿಶ್ಲೇಷಿಸಲು ಕಷ್ಟವಾಗುತ್ತಿತ್ತು.

ನ್ಯಾನೋ ಮಟೀರಿಯಲ್ ಸಂಕೇತಗಳನ್ನು ವರ್ಧಿಸುವುದರಿಂದ ಕ್ಯಾನ್ಸರ್ ಅನ್ನು ಬಹುಬೇಗ ಪತ್ತೆ ಮಾಡಬಹುದು. ರಾಮನ್ ನ್ಯಾನೋ ಸೆನ್ಸಾರ್ ನಲ್ಲಿ ಸಂಕೇತಗಳು ದೊರೆಯುತ್ತವೆ. ಅವನ್ನು ವಿಶ್ಲೇಷಿಸುವ ಸೌಲಭ್ಯ ಕೂಡ ಇರುವುದರಿಂದ 30 ನಿಮಿಷಗಳೊಳಗೆ ಫಲಿತಾಂಶ ದೊರೆಯುತ್ತದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...