alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಪರ್ ಸ್ಕ್ರಿಪ್ಟ್ ಬಳಸಿ ಕ್ಯಾನ್ಸರ್, ಮಲೇರಿಯಾ ಪತ್ತೆ ಹಚ್ಚಿ

Soon, cheap paper-based home test for cancer, malaria

ಮುಂದುವರೆದ ಸಂಶೊಧನೆಯಿಂದ ಈಗ ಮನೆಯಲ್ಲೇ ಮಧುಮೇಹ, ಪ್ರೆಗ್ನೆನ್ಸಿ ಪರೀಕ್ಷೆಗಳನ್ನು ನಾವು ಸುಲಭವಾಗಿ ಮಾಡಿಕೊಳ್ಳಬಹುದು.

ಈ ತರಹದ ಪರೀಕ್ಷೆಗಳಂತೆಯೇ ಪೇಪರ್ ಸ್ಕ್ರಿಪ್ಟ್ ಮಾದರಿಯಲ್ಲೇ ಮಲೇರಿಯಾ, ಕ್ಯಾನ್ಸರ್ ರೋಗಗಳನ್ನು ಕೂಡ ಪತ್ತೆ ಮಾಡುವ ಹೊಸ ವಿಧಾನ ಕಂಡುಹಿಡಿಯಲಾಗಿದೆ. ಇದನ್ನು ಓಹಿಯೋ ವಿಶ್ವವಿದ್ಯಾಲಯದ ಕೆಮೆಸ್ಟ್ರಿ ಹಾಗೂ ಬಯೋ ಕೆಮೆಸ್ಟ್ರಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಬ್ರಾಹಂ ಬದು ಕಂಡು ಹಿಡಿದಿದ್ದಾರೆ.

ಅಬ್ರಾಹಂ ಬದು ಅವರು ‘ಚಿಪ್ ನಲ್ಲಿ ಪ್ರಯೋಗಾಲಯ’ ಎಂಬ ಡಯಾಗ್ನಾಸ್ಟಿಕ್ ತಂತ್ರಜ್ಞಾನದಡಿ ಇದನ್ನು ಸಿದ್ಧಪಡಿಸಿದ್ದಾರೆ. ಬಿಳಿ ಕಾಗದದ ಹಾಳೆಗಳಿಂದ ಚಿಪ್ ತಯಾರಿಸಲಾಗಿದ್ದು, ಅದರ ಎರಡೂ ಕಡೆ ಅಂಟು ಟೇಪನ್ನು ಬಳಸಲಾಗಿದೆ. ಇದರಲ್ಲಿ ಟಿಪಿಕಲ್ ಇಂಕ್ ಜೆಟ್ ಪ್ರಿಂಟರ್ ಮೂಲಕ ಗರಗಸದ ಹಲ್ಲಿನಂತ ಚಿತ್ರ ಮುದ್ರಿಸಲಾಗಿದೆ. ಈ ತಂತ್ರಜ್ಞಾನ ಪ್ರಾಯೋಗಿಕ ಹಂತದಲ್ಲಿ ಯಶಸ್ಸು ಕಂಡಿದೆ. ಪೇಪರ್ ಸ್ಕ್ರಿಪ್ಟ್ ಬಳಸಿ ನಡೆಸಿದ ಪರೀಕ್ಷೆಯ ನಂತರ ರಕ್ತದ ಮಾದರಿ ತೆಗೆದುಕೊಂಡು ಪರಿಶೀಲಿಸಿದಾಗ ನಿಖರ ಫಲಿತಾಂಶ ದೊರಕಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಜನ ಕಾಯಿಲೆ ಬಗ್ಗೆ ತಿಳಿಯುವ ಮೊದಲೇ ಸಾವಿಗೆ ತುತ್ತಾಗುತ್ತಿದ್ದಾರೆ. ಕೆಲ ಹಿಂದುಳಿದ ಪ್ರದೇಶಗಳಲ್ಲಿ ವೈದ್ಯರ ಸೇವೆಯೂ ಇರುವುದಿಲ್ಲ. ಇಂತಹ ಪ್ರದೇಶದಲ್ಲಿ ಕಡಿಮೆ ವೆಚ್ಚದ ಈ ಪೇಪರ್ ಸ್ಕ್ರಿಪ್ಟ್ ತುಂಬ ಉಪಯೋಗವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...