alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಜಿ ಚಿಕಿತ್ಸೆಯಿಂದ ಸಿಗಲಿದೆ ಮೈಗ್ರೇನ್ ಗೆ ಪರಿಹಾರ

maigrain

ಮೈಗ್ರೇನ್ ಎಂದರೆ ಒಂದು ಭಾಗದ ತಲೆನೋವು ಇದನ್ನು ಹೆಮಿಕ್ರೇನಿಯಾ ಎಂದೂ ಕರೆಯುತ್ತಾರೆ. ವಿಪರೀತ ತಲೆನೋವು, ವಾಂತಿ, ಬೆಳಕು, ಶಬ್ದದ ಭಯ ಇವು ಈ ರೋಗದ ಲಕ್ಷಣಗಳು.

ಮೈಗ್ರೇನ್ ಗೆ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಂಡರೂ ಆ ಕ್ಷಣದಲ್ಲಿ ನೋವು ಕಡಿಮೆಯಾಗಬಹುದೇ ಹೊರತು ಅದು ಶಾಶ್ವತ ಪರಿಹಾರವಲ್ಲ. ಮೈಗ್ರೇನ್ ಗೆ ಅಕ್ಯುಪಂಕ್ಚರ್ (ಸೂಜಿ) ಚಿಕಿತ್ಸೆ ಬಹಳಷ್ಟು ಉಪಯುಕ್ತವಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎನ್ನಲಾಗಿದೆ. ಹೃದಯದ ಹಾಗೂ ಶ್ವಾಸಕೋಶದ ಕಾರ್ಯಗಳಿಗೂ ಇದು ಹಾನಿಯುಂಟು ಮಾಡುವುದಿಲ್ಲ ಮತ್ತು ಇದರಿಂದ ಯಾವುದೇ ಅಲರ್ಜಿಗಳೂ ಆಗುವುದಿಲ್ಲ.

ಮೈಗ್ರೇನ್ ಚಿಕಿತ್ಸೆಯಲ್ಲಿ ರಕ್ತನಾಳಗಳ ಪ್ರಚೋದಕ ಹಾಗೂ ಹಾರ್ಮೋನ್ ಪ್ರಚೋದಕ ಸೆಡೇಟಿವ್ ಬಿಂದುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ಆ ಬಿಂದುಗಳಿಗೆ ಸೂಜಿಯನ್ನು ಚುಚ್ಚುತ್ತಾರೆ. ಇದು ಮಿದುಳಿನಲ್ಲಿ ಉಂಟಾಗುವ ರಕ್ತನಾಳಗಳ ಸಂಕುಚನ ಮತ್ತು ವಿಕಸನಗಳನ್ನು ಸಮಂಜಸವಾಗಿರಿಸುತ್ತದೆ. ಇದರಿಂದ ಮೆದುಳಿನ ಸೆರಟೋನಿನ್ ಎಂಬ ಹಾರ್ಮೋನು ಹೆಚ್ಚಾಗಿ ಮೆದುಳಿನ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...