alex Certify ವೃದ್ಧಾಪ್ಯದಲ್ಲಿನ ಸೆಕ್ಸ್ ಹೆಚ್ಚಿಸುತ್ತೆ ಮೆದುಳಿನ ಶಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧಾಪ್ಯದಲ್ಲಿನ ಸೆಕ್ಸ್ ಹೆಚ್ಚಿಸುತ್ತೆ ಮೆದುಳಿನ ಶಕ್ತಿ

ನಿಯಮಿತವಾದ ಲೈಂಗಿಕ ಚಟುವಟಿಕೆಗಳು ವೃದ್ಧಾಪ್ಯದಲ್ಲೂ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ.

50 ರಿಂದ 83 ವರ್ಷದೊಳಗಿನ ಹಲವು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿ, ಈ ವರದಿಯನ್ನು ಸಿದ್ಧಪಡಿಸಲಾಗಿತ್ತು. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ನಿಯಮಿತ ಲೈಂಗಿಕ ಚಟುವಟಿಕೆ ನಡೆಸಿದವರು ಹಾಗೂ ಯಾವುದೇ ರೀತಿಯ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇರುವವರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು.

ಗಮನ, ಏಕಾಗ್ರತೆ, ಸ್ಮರಣೆ, ನೆನಪಿನ ಶಕ್ತಿ, ಭಾಷೆ, ನಿರರ್ಗಳತೆ ಮತ್ತು ದೃಷ್ಟಿಗೋಚರ ಯಾರ್ಯಾರಲ್ಲಿ ಎಷ್ಟಿದೆ ಅನ್ನೋದನ್ನು ಪರೀಕ್ಷಿಸಲಾಗಿದೆ. ವಾರಕ್ಕೊಮ್ಮೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದವರು ಈ ಪರೀಕ್ಷೆಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ವಯಸ್ಸಾದ ಮೇಲೆ ಜನರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಲೇಬಾರದು, ಅದು ಮುಜುಗರಕ್ಕೀಡು ಮಾಡುತ್ತದೆ ಅನ್ನೋ ಭಾವನೆ ಹಲವರಲ್ಲಿದೆ. ಆದ್ರೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವೃದ್ಧಾಪ್ಯದಲ್ಲೂ ಕೂಡ ಅದು ಅತ್ಯಂತ ಅವಶ್ಯಕ ಅಂತಾ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...