alex Certify
ಕನ್ನಡ ದುನಿಯಾ       Mobile App
       

Kannada Duniya

ಜನ ಸ್ವಿಮ್ಮಿಂಗ್ ಪೂಲ್ನಲ್ಲಿ ಏನ್ಮಾಡ್ತಾರೆ ಗೊತ್ತಾ..?

swim

ನಮ್ಮೆಲ್ಲರ ಆತಂಕ ಈಗ ನಿಜವಾಗಿದೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ನಾನ ಮಾತ್ರವಲ್ಲ ಜನ ಮೂತ್ರ ಕೂಡ ಮಾಡ್ತಾರೆ ಅನ್ನೋದು ದೃಢಪಟ್ಟಿದೆ. ಇದನ್ನು ಸುಖಾಸುಮ್ಮನೆ ಯಾರೂ ಒಪ್ಪಿಕೊಳ್ಳೋದಿಲ್ಲ, ಬೆರಳೆಣಿಕೆಯಷ್ಟು ಮಂದಿ ಮಾತ್ರ ಮಾಡಿದ್ದು ನಿಜ ಅಂತಾ ಹೇಳ್ತಾರಷ್ಟೆ.

ಹಾಗಾಗಿಯೇ ಕೆನಡಾದಲ್ಲಿ ಈ ಬಗ್ಗೆ ಸಂಶೋಧನೆ ನಡೆದಿದೆ. ಸಾರ್ವಜನಿಕ ಈಜುಕೊಳದ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಮೂತ್ರದ ಅಂಶಗಳು ಪತ್ತೆಯಾಗಿವೆ. ಕೆನಡಾದ ಒಟ್ಟು 29 ಸ್ವಿಮ್ಮಿಂಗ್ ಪೂಲ್ ಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಎರಡು ಸಾರ್ವಜನಿಕ ಈಜುಕೊಳಗಳಲ್ಲಿ ಅಪಾರ ಪ್ರಮಾಣದ ಮೂತ್ರ ಪತ್ತೆಯಾಗಿದೆ. 8,30,000 ಲೀಟರ್ ನೀರಿರುವ ಈಜುಕೊಳದಲ್ಲಿ 75 ಲೀಟರ್ ನಷ್ಟು ಮೂತ್ರವಿತ್ತು. 420,000 ಲೀಟರ್ ನೀರಿದ್ದ ಇನ್ನೊಂದು ಪೂಲ್ ನಲ್ಲಿ 30 ಲೀಟರ್ ಮೂತ್ರ ಪತ್ತೆಯಾಗಿದೆ. ಆದ್ರೆ ಯಾರು ಸ್ವಿಮ್ಮಿಂಗ್ ಪೂಲ್ ನಲ್ಲಿ ಮೂತ್ರ ವಿಸರ್ಜಿಸ್ತಾರೆ ಅನ್ನೋದನ್ನು ಪತ್ತೆ ಮಾಡುವುದು ಅಸಾಧ್ಯ. ಈ ರೀತಿ ಈಜುಕೊಳದಲ್ಲಿ ಮೂತ್ರ ಮಾಡುವುದರಿಂದ ಆರೋಗ್ಯಕ್ಕೂ ಅಪಾಯ ತಪ್ಪಿದ್ದಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...