alex Certify
ಕನ್ನಡ ದುನಿಯಾ       Mobile App
       

Kannada Duniya

ಮಸಲ್ಸ್ ಬೆಳೆಸಲು ಹೋಗಿ ಕೈಗಳನ್ನೇ ಕಳೆದುಕೊಳ್ಳೋ ಭೀತಿ

ಬಾಡಿ ಬಿಲ್ಡಿಂಗ್ ಈಗ ಟ್ರೆಂಡ್ ಆಗಿಬಿಟ್ಟಿದೆ. ಸಿಕ್ಸ್ ಪ್ಯಾಕ್, 8 ಪ್ಯಾಕ್, ಬೈಸೆಪ್ಸ್ ಬರಬೇಕು ಅಂತಾ ಎಲ್ರೂ ಸಾಕಷ್ಟು ಕಸರತ್ತು ಮಾಡ್ತಾರೆ. ಜಿಮ್ ನಲ್ಲಿ ಬೆವರಿಳಿಸ್ತಾರೆ. ಆದ್ರೆ ವರ್ಕೌಟ್ ಮಾಡುವ ಬದಲು ಬಾಡಿ ಬೆಳೆಸಲು ಬೇರೆ ಉಪಾಯ ಹುಡುಕಿಕೊಂಡ್ರೆ ಅಪಾಯ ತಪ್ಪಿದ್ದಲ್ಲ.

21 ವರ್ಷದ ರಷ್ಯಾದ ಬಾಡಿ ಬಿಲ್ಡರ್ ಸಿರಿಲ್ ಕ್ರ್ಯಾಚಿನ್ ಗೆ ಇಂಥದ್ದೇ ಕಹಿ ಅನುಭವವಾಗಿದೆ. ಮಸಲ್ಸ್ ಬೆಳೆಸಿಕೊಳ್ಳಲು ಹೋಗಿ ಕೈಗಳನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾನೆ. ಬೈಸೆಪ್ಸ್ ಬರಲಿ ಅಂತಾ ಮನೆಯಲ್ಲೇ ತಯಾರಿಸಿದ ರಾಸಾಯನಿಕ ಮಿಶ್ರಣವನ್ನು ಕೈಗಳಿಗೆ ಸಿರಿಲ್ ಇಂಜೆಕ್ಟ್ ಮಾಡಿಕೊಂಡಿದ್ದ.

ಅದರಿಂದ ದುಷ್ಪರಿಣಾಮ ಉಂಟಾಗಿದ್ದು, ಕೈ ಕೆಂಪಗೆ ಊದಿಕೊಂಡಿದೆ. ಕೈಗಳನ್ನು ಕತ್ತರಿಸಿ ಹಾಕಬೇಕಾದ ಪರಿಸ್ಥಿತಿ ಬರಬಹುದು ಅಂತಾ ವೈದ್ಯರು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ ಪಾರ್ಶ್ವವಾಯುವಿಗೆ ಆತ ತುತ್ತಾಗುವ ಸಾಧ್ಯತೆಯೂ ಇದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...