alex Certify ದಿನವಿಡೀ ದಣಿದ ದೇಹಕ್ಕೆ ಇರಲಿ ಒಂದಿಷ್ಟು ರಿಲ್ಯಾಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನವಿಡೀ ದಣಿದ ದೇಹಕ್ಕೆ ಇರಲಿ ಒಂದಿಷ್ಟು ರಿಲ್ಯಾಕ್ಸ್

ಆಧುನಿಕ ಜೀವನ ಶೈಲಿಯಿಂದ ಜನರ ಕೆಲಸದ ವಿಧಾನಗಳು ಬದಲಾಗಿವೆ. ಹಿಂದೆಲ್ಲಾ ದೈಹಿಕ ಶ್ರಮದ ಕೆಲಸಗಳು ಹೆಚ್ಚಾಗಿದ್ದವು. ಈಗ ಮಾನಸಿಕ ಒತ್ತಡದ ಕೆಲಸಗಳೇ  ಜಾಸ್ತಿಯಾಗಿವೆ.

ದೈಹಿಕ ಶ್ರಮದ ಜೊತೆಗೆ ಮಾನಸಿಕ ಒತ್ತಡಗಳಿಂದ ಕೆಲಸ ಮಾಡುವುದರಿಂದ ದೇಹ, ಮನಸ್ಸು ದಣಿಯುತ್ತದೆ. ದಣಿವಾದಾಗ ದೇಹ, ಮನಸ್ಸು ವಿಶ್ರಾಂತಿ ಬಯಸುತ್ತದೆ. ದಣಿವರಿಯದೇ ದುಡಿಯುವುದರಿಂದ ಒತ್ತಡಕ್ಕೆ ಒಳಗಾಗಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಬಿಡುವಿನ ವೇಳೆಯಲ್ಲಿ ಒಂದಿಷ್ಟು ರಿಲ್ಯಾಕ್ಸ್ ಮಾಡಿಕೊಳ್ಳಿ.

ಕೆಲಸ ಮಾಡುವಾಗಲೇ ಮೊಬೈಲ್ ರಿಂಗಣಿಸುತ್ತದೆ. ಮೊಬೈಲ್ ಸೌಂಡ್ ಆದ ಕೂಡಲೇ ಕೆಲಸದ ಮೇಲಿನ ಗಮನವೆಲ್ಲಾ ಫೋನ್ ಕಡೆಗೆ ಹರಿಯುತ್ತದೆ. ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಹೆಚ್ಚಾಗಿ ಮೊಬೈಲ್ ಬಳಸುವುದರಿಂದಲೂ ಏಕಾಗ್ರತೆ ಕಡಿಮೆಯಾಗುತ್ತದೆ.

ಸದಾ ಒತ್ತಡದಲ್ಲಿ ಕೆಲಸ ಮಾಡುವವರು, ಸಿಕ್ಕ ಅಲ್ಪ ವೇಳೆಯಲ್ಲಿ ಒಂದಿಷ್ಟು ರಿಲ್ಯಾಕ್ಸ್ ಪಡೆಯಿರಿ. ಆಗ ಹೊಸ ಚೈತನ್ಯದೊಂದಿಗೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...