alex Certify
ಕನ್ನಡ ದುನಿಯಾ       Mobile App
       

Kannada Duniya

ಒಬ್ಬರಿಗೆ ನೀರು ಅಲರ್ಜಿಯಾದರೆ ಮತ್ತೊಬ್ಬರಿಗೆ ಆಹಾರವೇ ಅಲರ್ಜಿ

narcolepsy

20 ವರ್ಷದ ಕೆ. ಅಂಡರ್ವುಡ್ ನಕ್ಕಿದಾಕ್ಷಣ ಮೂರ್ಛೆ ಹೋಗುತ್ತಾಳೆ. ಇವಳಿಗೆ cataplexy ಎಂಬ ರೋಗವಿದೆ. ಈ ರೋಗವಿರುವವರು ಯಾವುದೇ ಎಮೋಶನ್ ಗೆ ಒಳಗಾದರೆ ಅದು ನೇರವಾಗಿ ಅವರ ಮಾಂಸಖಂಡಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ನರಗಳು ದುರ್ಬಲವಾಗಿ ಅವರು ಮೂರ್ಛೆ ಹೋಗುತ್ತಾರೆ.

ಹಾಲೆಂಡಿನ ವಿಮ್ ಹಾಫ್ ಅವರಿಗೆ ಹಿಮಗಡ್ಡೆಯ ಮೇಲೆ ಕೂತರೂ ಏನೂ ಆಗುವುದಿಲ್ಲ. ಇವರ ಈ ಸಾಮರ್ಥ್ಯದ ಬಗ್ಗೆ ವಿಜ್ಞಾನಿಗಳೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅವರು ತುಂಡುಡುಗೆಯಲ್ಲಿ ಬೇಕಾದರೂ ಐಸ್ ಮೇಲೆ ಕೂರುತ್ತಾರೆ. ಅವರು ಎಷ್ಟು ಕಡಿಮೆ ತಾಪಮಾನದಲ್ಲಿ ಇರುತ್ತಾರೋ ಅಷ್ಟು ತಾಪಮಾನದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಖಂಡಿತ ಇರಲಾರ.

ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ನಾನು ದಪ್ಪಗಾಗಬಾರದೆಂದು ಬೇಡಿಕೊಳ್ಳುತ್ತಾರೆ. ಆದರೆ 59 ವರ್ಷದ ಪೆರಿ ಅವರಿಗೆ lipodystrophy ಹೆಸರಿನ ಖಾಯಿಲೆಯಿದೆ. ಇದು ದೇಹದ ಕೊಬ್ಬನ್ನು ಬಹುಬೇಗ ಕರಗಿಸಿಬಿಡುತ್ತದೆ. ಇದರಿಂದಾಗಿ ರಾತ್ರೋ ರಾತ್ರಿ ಇವರ ತೂಕ ಇಳಿಯುತ್ತದೆ.

17 ವರ್ಷದ ನತಾಲಿ ಕಪೂರ್ ಎಂಬುವಳು ಆಹಾರವನ್ನು ತಿನ್ನದೆ ದಿನಂಪ್ರತಿ ಕೇವಲ ಟಿಕ್ ಟ್ಯಾಕ್ ತಿನ್ನುತ್ತಾಳೆ. ಹಾಗೇನಾದರೂ ಈಕೆ ಬೇರೆ ಆಹಾರವನ್ನು ತಿಂದರೆ ಅವಳು ಅಸ್ವಸ್ಥಳಾಗುತ್ತಾಳೆ.

3 ವರ್ಷದ ಚಿಕ್ಕ ಹುಡುಗ 24 ಗಂಟೆ ನಿದ್ದೆ ಮಾಡದೆ ಎಚ್ಚರವಾಗಿಯೇ ಇರುತ್ತಾನೆ. ಇವನಿಗೆ Chiari Malformation ಎಂಬ ಅಪರೂಪದ ರೋಗವಿದೆ. ಈ ರೋಗ ಮಿದುಳಿನ ಕಾಂಡಗಳನ್ನು ತಡೆಯುತ್ತದೆ. ಇದು ನಿದ್ರೆಯನ್ನು ನಿಯಂತ್ರಿಸುತ್ತದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿವಾಸಿ ಎಶಿಲೆಗ್ ಮೊರಿಸ್ ಗೆ Aquagenic Urticaria ರೋಗವಿದೆ. ಈ ರೋಗವಿರುವವರಿಗೆ ನೀರು ಅಲರ್ಜಿ. ಹಾಗೊಮ್ಮೆ ಇವರು ನೀರು ಕುಡಿದರೆ ಇವರಿಗೆ ಮೈಮೇಲೆ ಕೆಂಪು ಗುಳ್ಳೆಗಳು ಏಳುತ್ತವೆ. ನೀರು ಕುಡಿಯುವುದೊಂದೇ ಅಲ್ಲ, ಮೈಮೇಲೆ ನೀರು ಬಿದ್ದರೂ ಗುಳ್ಳೆಗಳು ಏಳುತ್ತವೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...