alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟ್ ಚಟ ಬಿಡಿಸುತ್ತೆ ಈ ಸ್ಮಾರ್ಟ್ ಲೈಟರ್

ಒಮ್ಮೆ ಹಿಡಿದ ಚಟವನ್ನು ಬಿಡೋದು ಸುಲಭವಲ್ಲ. ಧೂಮಪಾನವೂ ಇದ್ರಲ್ಲಿ ಒಂದು. ಚೈನ್ಸ್ ಸ್ಮೋಕರ್ ಗಳಿಗೆ ಸಿಗರೇಟು ಬಿಡೋದು ಕಷ್ಟವಾದ ಮಾತು. ಧೂಮಪಾನದಿಂದ ಹೊರ ಬರಲು ಮಾರುಕಟ್ಟೆಯಲ್ಲಿ ಅನೇಕ ಚೂಯಿಂಗ್ ಗಮ್ ಗಳು ಬಂದಿವೆ. ಆದ್ರೆ ಕಂಪನಿಯೊಂದು ಲೈಟರ್ ಒಂದನ್ನು ಮಾರುಕಟ್ಟೆಗೆ ತಂದಿದೆ.

ಕಂಪನಿ ಪ್ರಕಾರ ಈ ಲೈಟರ್ ಸಿಗರೇಟು ಬಿಡಲು ನೆರವಾಗುತ್ತದೆಯಂತೆ. ಇದು ವಿಶ್ವದ ಮೊದಲ ಸ್ಮಾರ್ಟ್ ಲೈಟರ್ ಆಗಿದ್ದು, ಇದ್ರ ಹೆಸರು ಕ್ವಿಟ್ ಬಿಟ್. ಇದೊಂದು ಸ್ಮಾರ್ಟ್ ಲೈಟರ್ ಆಗಿದ್ದು ಹೀಟಿಂಗ್ ಕಾಯಿಲ್ ನಿಂದ ನಡೆಯುತ್ತದೆ. ಈ ಸ್ಮಾರ್ಟ್ ಲೈಟರ್ ಸಿಗರೇಟ್ ಸೇದುವ ಕೆಟ್ಟ ಹವ್ಯಾಸದಿಂದ ಹೊರ ಬರಲು ನೆರವಾಗುತ್ತದೆಯಂತೆ. ಸಿಗರೇಟ್ ಸೇದುವ ಎಲ್ಲ ಅಂಕಿ-ಅಂಶವನ್ನು ಸಂಗ್ರಹಿಸುತ್ತದೆಯಂತೆ.

ಇದ್ರ ಬೆಲೆ 129 ಡಾಲರ್( ಸುಮಾರು 8300 ರೂ.). ನೀವು ಎಷ್ಟು ಹೊತ್ತಿನ ಹಿಂದೆ ಸಿಗರೇಟ್ ಸೇದಿದ್ದೀರಿ ಎಂಬುದನ್ನು ಇದು ಹೇಳುತ್ತದೆಯಂತೆ. ಜೊತೆಗೆ ದಿನದಲ್ಲಿ ನೀವು ಎಷ್ಟು ಸಿಗರೇಟ್ ಸೇದಿದ್ದೀರಿ ಎಂಬ ಮಾಹಿತಿಯನ್ನೂ ಇದು ನೀಡುತ್ತದೆ. ಧೂಮಪಾನ ಮಾಡಿದ ಕೆಲವೇ ಕ್ಷಣಗಳಲ್ಲಿ ಇನ್ನೊಂದು ಸಿಗರೇಟ್ ಕೈಗೆತ್ತಿಕೊಂಡರೆ ಅದ್ರ ಬಗ್ಗೆಯೂ ಇದು ಮಾಹಿತಿ ನೀಡಲಿದೆ. ಸಿಗರೇಟ್ ಸೇದದಂತೆ ಎಚ್ಚರಿಸಲು ಅಲರಾಂ ಕೂಡ ಫಿಕ್ಸ್ ಮಾಡಬಹುದು.

ಎರಡು ಗಂಟೆ ಫುಲ್ ಚಾರ್ಜ್ ಮಾಡಿದಲ್ಲಿ ಇದು 4-7 ದಿನ ಬರಲಿದೆ. ನೀವು ಸಿಗರೇಟು ಸೇದಿದ ಎಲ್ಲ ಡೇಟಾ ಕ್ವಿಟ್ ಬಿಟ್ ಆ್ಯಪ್ ನಲ್ಲಿ ನಿಮಗೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...