alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ 10ಕ್ಕೂ ಹೆಚ್ಚು ಚಾಕ್ ಪೀಸ್ ತಿನ್ನುತ್ತಿದ್ಲು ಈ ಗರ್ಭಿಣಿ…!

ಗರ್ಭಿಣಿಯರಿಗೆ ಬಯಕೆಯಾಗೋದು ಮಾಮೂಲಿ. ಕೆಲ ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ತುಂಬಾ ಸಿಹಿ ತಿಂದ್ರೆ ಮತ್ತೆ ಕೆಲವರು ಹುಳಿ ತಿನ್ನಲು ಇಷ್ಟಪಡ್ತಾರೆ. ಆದ್ರೆ ಈ ಮಹಿಳೆ ಸಿಹಿ-ಖಾರದ ಬದಲು ಚಾಕ್ ಪೀಸ್ ತಿನ್ನಲು ಶುರುಮಾಡಿದ್ದಳು.

25 ವರ್ಷದ ರಿಬೆಕ್ಕಾ ಅದಿಮೋರಾ ಚಾಕ್ ಪೀಸ್ ತಿನ್ನುವ ಚಟಕ್ಕೆ ಬಿದ್ದಿದ್ದಳು. ರಿಬೆಕ್ಕಾ ಎರಡನೇ ಬಾರಿ ಗರ್ಭವತಿಯಾದಾಗ ಈ ಹವ್ಯಾಸ ಶುರುವಾಗಿತ್ತು. ಒಂದಲ್ಲ ಎರಡಲ್ಲ 10ಕ್ಕೂ ಹೆಚ್ಚು ಚಾಕ್ ಪೀಸನ್ನು ದಿನವೊಂದಕ್ಕೆ ತಿನ್ನುತ್ತಿದ್ದಳು. ಕೆಲ ದಿನಗಳ ಹಿಂದಷ್ಟೇ ರಿಬೆಕ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಗರ್ಭಿಣಿಯಾದಾಗ ಚಿತ್ರವಿಚಿತ್ರ ಬಯಕೆ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಮೊದಲ ಬಾರಿ ಗರ್ಭಿಣಿಯಾದಾಗ ರಿಬೆಕ್ಕಾಗೆ ಟಾಯ್ಲೆಟ್ ರೋಲ್ ತಿನ್ನುವ ಆಸೆಯಾಗ್ತಿತ್ತಂತೆ. ಚಾಕ್ ಪೀಸ್ ತಿನ್ನುತ್ತಿದ್ದಂತೆ ಆಕೆಗೆ ತೃಪ್ತಿ ಸಿಗುತ್ತಿತ್ತಂತೆ. ಆನ್ಲೈನ್ ನಲ್ಲಿ ಚಾಕ್ ಪೀಸ್ ಖರೀದಿ ಮಡುತ್ತಿದ್ದಳಂತೆ. ಆದ್ರೆ ಈ ಚಟ ಆಕೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾಳೆ ರಿಬೆಕ್ಕಾ. ಈಕೆ ಪಿಕಾ ಸಿಂಡ್ರೋಮ್ ದಿಂದ ಬಳಲುತ್ತಿದ್ದಳು. ದೇಹದಲ್ಲಿ ಕಬ್ಬಿಣಾಂಶ ಕಡಿಮೆ ಇದ್ದಾಗ ಇಂಥ ಬಯಕೆಯುಂಟಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ರಿಬೆಕ್ಕಾ ಒಂದೇ ಅಲ್ಲ ಗರ್ಭಿಣಿಯರಿಗೆ ವಿಚಿತ್ರ ಆಸೆ ಹುಟ್ಟೋದು ಸಹಜ. ಕೆಲವರು ಸ್ಪಂಜ್, ಮಣ್ಣು ಹೀಗೆ ಬೇರೆ ಬೇರೆ ವಸ್ತುಗಳನ್ನು ತಿನ್ನುವವರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...