alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ನೋವು ಹೆಚ್ಚಾಗಲು ಈ ಹವ್ಯಾಸಗಳು ಕಾರಣ

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ಅನುಭವಿಸಲೇಬೇಕು. ಕೆಲವರನ್ನು ಮುಟ್ಟು ಅತಿಯಾಗಿ ಕಾಡುತ್ತದೆ. ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿ ಸಾಕಪ್ಪ ಸಾಕು ಎನ್ನುವಂತೆ ಮಾಡುತ್ತದೆ. ಮುಟ್ಟಿನ ನೋವು ಹೆಚ್ಚಾಗಲು ನಮ್ಮ ಜೀವನ ಶೈಲಿ ಕೂಡ ಕಾರಣ. ನಾವು ತಿನ್ನುವ ಆಹಾರ ಹಾಗೂ ಜೀವನಾಭ್ಯಾಸಗಳು ಮುಟ್ಟಿನ ನೋವನ್ನು ಹೆಚ್ಚು ಮಾಡುತ್ತವೆ.

ನಿದ್ರೆ ಕೊರತೆ : ದೇಹದಲ್ಲಿ ಹಾರ್ಮೋನುಗಳ ಸಮತೋಲನಕ್ಕೆ ನಿದ್ರೆ ಬೇಕೇಬೇಕು. ಅಗತ್ಯವಿರುವಷ್ಟು ನಿದ್ರೆ ದೇಹಕ್ಕೆ ಸಿಕ್ಕಿಲ್ಲವೆಂದಾದ್ರೆ ಮುಟ್ಟಿನ ಅವಧಿಯಲ್ಲಿ ನೋವು ತಿನ್ನಬೇಕಾಗುತ್ತದೆ.

ಕಾಫಿ ಚಟ : ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದ್ರಿಂದ ಮುಟ್ಟಿನ ಸಮಯದಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಕಾಫಿಯಲ್ಲಿರುವ ಕೆಫೆನ್ ಇದಕ್ಕೆ ಕಾರಣ. ಕಾಫಿ ಕುಡಿಯುವುದ್ರಿಂದ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಇದು ರಕ್ತನಾಳ ಕಿರಿದಾಗಿ ನೋವು ಹೆಚ್ಚಾಗಲು ಕಾರಣವಾಗುತ್ತದೆ.

ಧೂಮಪಾನ-ಆಲ್ಕೋಹಾಲ್ : ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಆದ್ರೆ ಇದು ಮುಟ್ಟಿನ ಮೇಲೂ ಪ್ರಭಾವ ಬೀರುತ್ತದೆ. ಅನೇಕ ಅಧ್ಯಯನಗಳಿಂದ ಈ ವಿಷ್ಯ ಬಹಿರಂಗವಾಗಿದೆ. ಧೂಮಪಾನ ಹಾಗೂ ಮದ್ಯಪಾನ ಮಾಡುವ ಮಹಿಳೆಯರಲ್ಲಿ ಮುಟ್ಟಿನ ವೇಳೆ ಹೆಚ್ಚು ನೋವಾಗುತ್ತದೆ.

ವ್ಯಾಯಾಮ : ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಬೇಕೆಂದ್ರೆ ವ್ಯಾಯಾಮ ಮಾಡಬೇಕು. ವ್ಯಾಯಾಮ ಆರೋಗ್ಯ ವೃದ್ಧಿಗೆ ಒಳ್ಳೆಯದು. ಆದ್ರೆ ಬಹುತೇಕ ಮಹಿಳೆಯರು ಮುಟ್ಟಿನ ವೇಳೆ ಮೂರು ಹೊತ್ತು ಹಾಸಿಗೆ ಮೇಲಿರುತ್ತಾರೆ. ಇದು ನೋವು ಇನ್ನಷ್ಟು ದಿನ ಕಾಡಲು ಕಾರಣವಾಗುತ್ತದೆ.

ಸಿಹಿ ಹಾಗೂ ಉಪ್ಪಿನ ಆಹಾರ : ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾದ್ರೆ ಉರಿಯೂತ ಕಾಡುತ್ತದೆ. ಉಪ್ಪು ಕೂಡ ಮುಟ್ಟಿನ ನೋವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಮುಟ್ಟಿನ ವೇಳೆ ಸಕ್ಕರೆ ಹಾಗೂ ಉಪ್ಪಿನಿಂದ ದೂರವಿರುವುದು ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...