alex Certify
ಕನ್ನಡ ದುನಿಯಾ       Mobile App
       

Kannada Duniya

ಯಡವಟ್ ವೈದ್ಯನಿಗೆ 5.6 ಕೋಟಿ ರೂ. ದಂಡ

become-a-medical-doctor-in-germany

ಪೆನ್ಸಿಲ್ವೇನಿಯಾದಲ್ಲಿ ರೋಗಿಯೊಬ್ಬನ ಆರೋಗ್ಯಕರ ವೃಷಣವನ್ನೇ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದ ಯಡವಟ್ ವೈದ್ಯನಿಗೆ ದಂಡ ಹಾಕಲಾಗಿದೆ. 870,000 ಡಾಲರ್ ಹಣವನ್ನು ವೈದ್ಯ ಪರಿಹಾರವಾಗಿ ರೋಗಿಗೆ ಕೊಡಬೇಕಿದೆ. 2013ರಲ್ಲಿ ಸ್ಟೀವನ್ ಹೇನ್ಸ್ ಎಂಬಾತ ಬಲಭಾಗದ ವೃಷಣದಲ್ಲಿ ನೋವು ಕಾಣಿಸಿಕೊಂಡಿದ್ರಿಂದ ಆಸ್ಪತ್ರೆಗೆ ದಾಖಲಾಗಿದ್ದ.

ಹಲವು ವರ್ಷಗಳಿಂದ ಸ್ಟೀವನ್ ಗೆ ಈ ಸಮಸ್ಯೆ ಇತ್ತು. ಡಾ.ವ್ಯಾಲಿ ಸ್ಪೆನ್ಸರ್ ಲಾಂಗ್ ಎಂಬಾತ ಸ್ಟೀವನ್ ಗೆ ಶಸ್ತ್ರಚಿಕಿತ್ಸೆ ಮಾಡಿದ್ದ. ಸರ್ಜರಿ ವೇಳೆ ಸಮಸ್ಯೆ ಇದ್ದ ಬಲವೃಷಣದ ಬದಲು, ವೈದ್ಯ ಎಡಭಾಗದ ವೃಷಣವನ್ನು ತೆಗೆದು ಹಾಕಿದ್ದಾನೆ.

ವೈದ್ಯ ಮಾಡಿದ ಈ ಪ್ರಮಾದದಿಂದ ರೋಗಿ ಎರಡೂ ವೃಷಣವನ್ನು ಕಳೆದುಕೊಂಡಿದ್ದ. ಹಾಗಾಗಿ ವೈದ್ಯನಿಗೆ 870,000 ಡಾಲರ್ ದಂಡ ವಿಧಿಸಲಾಗಿದೆ. ವೈದ್ಯನ ಅಜಾಗರೂಕತೆ ಹಾಗೂ ಅಸಡ್ಡೆಯೇ ರೋಗಿಯ ಸಮಸ್ಯೆ ಉಲ್ಬಣಿಸಲು ಕಾರಣ ಅಂತಾ ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...