alex Certify
ಕನ್ನಡ ದುನಿಯಾ       Mobile App
       

Kannada Duniya

…ಇದೇ ಈ ವೃದ್ಧ ಸನ್ಯಾಸಿಯ ಆಯುಷ್ಯದ ಗುಟ್ಟು

1781

ಯೋಗ ಆರೋಗ್ಯದ ಗುಟ್ಟು. ಪ್ರತಿನಿತ್ಯ ಯೋಗ ಮಾಡಿದ್ರೆ ಉತ್ತಮ ಆರೋಗ್ಯದ ಜೊತೆಗೆ ಸೆಂಚುರಿ ಬಾರಿಸಬಹುದು. ಇದಕ್ಕೆ ಈ ವೃದ್ಧ ಸನ್ಯಾಸಿ ಉತ್ತಮ ಉದಾಹರಣೆ.

ಇತ್ತೀಚಿಗಷ್ಟೇ ವೃದ್ಧ ಸನ್ಯಾಸಿ ನಾನು ಅತಿ ಹೆಚ್ಚು ವರ್ಷ ಬದುಕಿದ ಹಿರಿಯ ಮನುಷ್ಯ ಎಂದಿದ್ದಾರೆ. ತನ್ನ ಈ ದೀರ್ಘಾಯುಷ್ಯಕ್ಕೆ ಯೋಗ ಹಾಗೂ ಪ್ರತಿದಿನದ ವ್ಯಾಯಾಮವೇ ಕಾರಣ ಎಂದಿದ್ದಾರೆ. ಪಾಸ್ ಪೋರ್ಟ್ ಪ್ರಕಾರ ಅವರ ಹೆಸರು ಸ್ವಾಮಿ ಶಿವಾನಂದ. ಆಗಸ್ಟ್ 8,1896 ರಲ್ಲಿ ಜನಿಸಿದ್ದಾರೆ. ಅಂದ್ರೆ ಈಗ ಇವರ ವಯಸ್ಸು 120 ವರ್ಷ. ವಾರಣಾಸಿಯ ನಿವಾಸಿ ಶಿವಾನಂದ್ ದೇವಸ್ಥಾನವೊಂದರ ಪೂಜಾರಿ.

120 ವರ್ಷವಾದ್ರೂ ಸದೃಢವಾಗಿರುವ ಪೂಜಾರಿ, ಪ್ರತಿದಿನ ಕೆಲವು ಗಂಟೆ ವ್ಯಾಯಾಮ ಮಾಡ್ತಾರೆ. ವ್ಯಾಯಾಮ, ಶಿಸ್ತು ಹಾಗೂ ಬ್ರಹ್ಮಚರ್ಯದ ಪಾಲನೆಯೇ ಇವರ ಆರೋಗ್ಯದ ಗುಟ್ಟಂತೆ. ನೆಲಕ್ಕೆ ಚಾಪೆ ಹಾಸಿಕೊಂಡು ಮಲಗುವ ಇವರು ತಲೆ ದಿಂಬನ್ನು ಮಾತ್ರ ಬಳಸ್ತಾರೆ.

ಸದ್ಯ ವಿಶ್ವ ದಾಖಲೆಯಲ್ಲಿ ಶಿವಾನಂದ್ ಹೆಸರು ಸೇರ್ಪಡೆಯಾಗಲಿದೆ. ನಿಮಗೆ ತಿಳಿದಿರುವಂತೆ ಈ ಹಿಂದೆ ಜಪಾನಿನ ಜಿರೋಮನ್ ಕಿಮುರಾ ಅತ್ಯಂತ ಅಧಿಕ ವರ್ಷ ಬದುಕಿದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.2013ರಲ್ಲಿ ಕಿಮುರಾ ಸಾವನ್ನಪ್ಪಿದಾಗ ಅವರ ವಯಸ್ಸು 116 ವರ್ಷದ 54 ದಿನಗಳಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...