alex Certify
ಕನ್ನಡ ದುನಿಯಾ       Mobile App
       

Kannada Duniya

ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಲಿದೆ ಹೊಸ ತಂತ್ರಜ್ಞಾನ

cancer

ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ರೋಗ ಪತ್ತೆ ಮಾಡಲು ಸಾಧ್ಯವಾಗಲಿದೆ. MicroRNA ನ್ಯೂಕ್ಲಿಯಿಕ್ ತೆರನಾದ ಆಸಿಡ್ ಡಿಎನ್ಎ ಸದ್ಯ ಗಿಡಗಳು ಮತ್ತು ಪ್ರಾಣಿಗಳಲ್ಲಿದೆ.

ಕ್ಯಾನ್ಸರ್ ಪೀಡಿತ ಮನುಷ್ಯರ ದೇಹದಲ್ಲಿ ಇದು ಪತ್ತೆಯಾಗುತ್ತದೆ. ರಕ್ತ, ಮೂತ್ರ ಮತ್ತು ಉಗುಳಿನಲ್ಲಿ ಈ ಅಂಶ ಕಾಣಸಿಗುತ್ತದೆ. ನಿರಂತರವಾಗಿ ಮನೆಯಲ್ಲೇ ಮಾನಿಟರ್ ಮಾಡುವಂತಹ, ಆಟೋಮ್ಯಾಟಿಕ್ ಆಗಿ ಅಲರ್ಟ್ ಮಾಡಬಲ್ಲ ಸಾಧನವನ್ನು ರೋಡ್ ಐಲ್ಯಾಂಡ್ ಯೂನಿವರ್ಸಿಟಿ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಮನುಷ್ಯನ ಕೂದಲಿಗಿಂತ್ಲೂ 100,000 ಪಟ್ಟು ಚಿಕ್ಕದಾಗಿರುವ ಸಣ್ಣ ಸೂಜಿಯನ್ನು ಚರ್ಮದ ಅಡಿಯಲ್ಲಿ ಅಳವಡಿಸಲಾಗುತ್ತದೆ. ಕ್ಯಾನ್ಸರ್ ತಗುಲಿದ್ದರೆ ಅದು ಬೀಪ್ ಸೌಂಡ್ ಮೂಲಕ ರೋಗಿಯನ್ನು ಅಲರ್ಟ್ ಮಾಡುತ್ತದೆ. ಇದಕ್ಕಾಗಿ ವಾಚ್ ನಂತೇ ಇರುವ ಡಿವೈಸ್ ಒಂದನ್ನು ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...