alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ಕಾಯಿಲೆ ಪರಿಹಾರಕ್ಕೆ ಹೊಸ ಆವಿಷ್ಕಾರ

cancer_44578

ಸಂಶೋಧಕರು ಕ್ಯಾನ್ಸರ್ ರೋಗಕ್ಕೊಂದು ಹೊಸ ಚಿಕಿತ್ಸೆ ಕಂಡುಹಿಡಿದಿದ್ದಾರೆ. ಈ ಚಿಕಿತ್ಸೆ ಕ್ಯಾನ್ಸರ್ ಉಂಟಾಗಿರುವ ಭಾಗಗಳಿಗೆ ಮಾತ್ರ ನೀಡುವುದಾಗಿದ್ದು, ಇದರಿಂದ ದೇಹದ ಇತರ ಭಾಗಗಳಿಗೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.

ಈ ಹಿಂದೆ ಕ್ಯಾನ್ಸರ್ ಗೆ ಒಳಗಾದ ರೋಗಿಗಳ ಕೂದಲು ಕಿಮೋಥೆರಫಿಯ ನಂತರ ಪೂರ್ತಿಯಾಗಿ ಉದುರಿ ತಲೆಬೋಳಾಗುತ್ತದೆ. ಇಂತಹ ಅಡ್ಡಪರಿಣಾಮಗಳು ಈ ಹೊಸ ಚಿಕಿತ್ಸಾ ವಿಧಾನದಲ್ಲಿ ಆಗುವುದಿಲ್ಲ ಎಂದು ಸಂಶೋಧನಾ ತಂಡದ ಮ್ಯಾಥ್ಯೂ ಗಾಡ್ವಿನ್ ಹೇಳಿದ್ದಾರೆ.

ಈ ಹೊಸ ವಿಧಾನದಲ್ಲಿ ರಾಸಾಯನಿಕ ಸಂಯುಕ್ತಗಳನ್ನು ಮತ್ತು ನೆಟ್ರೊಬೆನ್ಜಾಲ್ಡಿಹೈಡ್ ಅನ್ನು ಕ್ಯಾನ್ಸರ್ ಕೋಶಗಳಿಗೆ ಇಂಜೆಕ್ಷನ್ ಮೂಲಕ ಕೊಡುತ್ತಾರೆ. ನಂತರ ಮೆತ್ತನೆಯ ಹತ್ತಿಬಟ್ಟೆಯನ್ನು ಕ್ಯಾನ್ಸರ್ ಉಂಟಾದ ಗ್ರಂಥಿಯ ಮೇಲೆ ಇಟ್ಟು ಇದರ ಮೂಲಕ ವಿಕಿರಣವನ್ನು ಬಿಡಲಾಗುತ್ತದೆ. ಇದು ನೇರವಾಗಿ ಕ್ಯಾನ್ಸರ್ ಗ್ರಂಥಿಗಳನ್ನು ಪ್ರತಿಶತ 95ರಷ್ಟು ಸಾಯಿಸುತ್ತದೆ ಎನ್ನಲಾಗಿದೆ.

ಈ ವಿಧಾನದಿಂದ ಕ್ಯಾನ್ಸರ್ ಕೋಶಗಳು ಮತ್ತೆ ಬೆಳೆಯುವುದಾಗಲೀ, ಮತ್ತೊಮ್ಮೆ ಕ್ಯಾನ್ಸರ್ ಸಂಭವಿಸುವುದಾಗಲೀ ಆಗುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...