alex Certify
ಕನ್ನಡ ದುನಿಯಾ       Mobile App
       

Kannada Duniya

ಸೆ.1 ರಿಂದ ಸಿಗರೇಟ್ ಪ್ಯಾಕ್ ಮೇಲೆ ಹೊಸ ಎಚ್ಚರಿಕೆ ಚಿತ್ರ

ನವದೆಹಲಿ: ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಈಗ ಬಳಸುತ್ತಿರುವ ಸಂದೇಶ ಚಿತ್ರಗಳ ಬದಲು ಹೊಸ ಚಿತ್ರಗಳ ಬಳಕೆಗೆ ಕೇಂದ್ರ ನಿರ್ಧರಿಸಿದ್ದು, ಹೊಸ ಚಿತ್ರಗಳ ಬಳಕೆ ಸೆ.1 ರಿಂದ ಜಾರಿಗೆ ಬರಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿರ್ದಿಷ್ಟ ಆರೋಗ್ಯ ಎಚ್ಚರಿಕೆ ಚಿತ್ರಗಳ ಎರಡು ಸೆಟ್ ಬಿಡುಗಡೆ ಮಾಡಿದೆ.

ಮೊದಲನೆಯದು ಸೆಪ್ಟೆಂಬರ್ ನಿಂದ 12 ತಿಂಗಳ ಅವಧಿಯವರೆಗೆ ಮಾನ್ಯವಾಗಿರುತ್ತದೆ ಮತ್ತು ಅದರ ನಂತರ ಎರಡನೆಯದು ಕಾರ್ಯರೂಪಕ್ಕೆ ಬರಲಿದೆ.

ತಂಬಾಕು ಉತ್ಪಾದನೆ, ಸರಬರಾಜು, ಆಮದು ಅಥವಾ ವಿತರಣೆ ಅಥವಾ ಯಾವುದೇ ಉತ್ಪನ್ನಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿದ ವ್ಯಕ್ತಿಯು ಎಲ್ಲಾ ತಂಬಾಕು ಉತ್ಪನ್ನ ಪ್ಯಾಕೇಜುಗಳಿಗೆ ನಿರ್ದಿಷ್ಟವಾಗಿ ಸೂಚಿಸಲಾದ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿದೆಯೆಂದು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ.

ಸರ್ಕಾರ ರೂಪಿಸಿದ ನಿಯಮಗಳನ್ನು ಉಲ್ಲಂಘಿಸುವವರು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ (ಜಾಹೀರಾತು ಮತ್ತು ವಾಣಿಜ್ಯ ಮತ್ತು ಉತ್ಪಾದನಾ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ಹಂಚಿಕೆ) ಕಾಯಿದೆ, 2003 ರ ಸೆಕ್ಷನ್ 20 ರಲ್ಲಿರುವಂತೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...