alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 45 ನಿಮಿಷದಲ್ಲಿ ದೂರವಾಗಲಿದೆ ಬೊಜ್ಜು ..!

ಬೊಜ್ಜು ಕರಗಿಸಲು ಮುಂದಾಗಿರುವ ಜನರಿಗೊಂದು ಖುಷಿ ಸುದ್ದಿ. ದೇಶದಲ್ಲಿ ಈಗ ಇಎಸ್ ಜಿ ಸರ್ಜರಿ ಮೂಲಕ ಬೊಚ್ಚನ್ನು ಕಡಿಮೆ ಮಾಡಲಾಗುತ್ತಿದೆ. ಜನವರಿ 8 ರಂದು ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಇಎಸ್ ಜಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.

ಡಾಕ್ಟರ್ ಅಮಿತ್ ಮೈದೇವ್ ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ತೂಕ 20-30 ಕೆ.ಜಿ ಇಳಿಯಲಿದೆ. ಥಾಣೆಯ 45 ವರ್ಷದ ಪುಷ್ಪಾ ಎಂಬಾಕೆಗೆ ಇಎಸ್ ಜಿ ಸರ್ಜರಿ ಮಾಡಲಾಗಿದೆ. ಬಯಾಟ್ರಿಕ್ ಸರ್ಜರಿ ಮೂಲಕ ಬೊಜ್ಜು ಕರಗಿಸಲಾಗುತ್ತಿತ್ತು. ಆದ್ರೆ ಇದ್ರಲ್ಲಿ ಕೆಲವೊಂದು ಸಮಸ್ಯೆ ಕಾಡುತ್ತಿತ್ತು.

ಇಎಸ್ ಜಿ ಸರ್ಜರಿಯಾದ ಎರಡು ಗಂಟೆ ನಂತ್ರ ನೀರು ಕುಡಿಯಬಹುದು. ಜೊತೆಗೆ ವಾರ್ಡ್ ನಲ್ಲಿ ಓಡಾಡಬಹುದು. 45 ನಿಮಿಷ ನಡೆಯುವ ಈ ಸರ್ಜರಿಗೆ 2 ಲಕ್ಷದ 50 ಸಾವಿರ ಖರ್ಚು ಬರುತ್ತದೆ. ಇನ್ನು ಆರು ತಿಂಗಳಲ್ಲಿ ಸರ್ಜರಿ ಬೆಲೆ 70 ಸಾವಿರದಷ್ಟು ಇಳಿಯುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...