alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಪಿತ್ತಕೋಶದಲ್ಲಿತ್ತು 2350 ಕಲ್ಲುಗಳ ರಾಶಿ…!

ಮುಂಬೈನ ಭಕ್ತಿವೇದಾಂತ ಆಸ್ಪತ್ರೆಯಲ್ಲಿ ಮಹಿಳೆಯ ಪಿತ್ತಕೋಶದಲ್ಲಿದ್ದ 2350 ಕಲ್ಲುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಕ್ಲಿಷ್ಟಕರವಾದ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಕಲ್ಲುಗಳನ್ನು ಹೊರತೆಗೆಯಲಾಗಿದೆ.

2016ರ ನವೆಂಬರ್ ನಲ್ಲೇ 50 ವರ್ಷದ ಮಹಿಳೆಯ ಪಿತ್ತಕೋಶದಲ್ಲಿ ಕಲ್ಲು ಬೆಳೆದಿರುವುದು ಗೊತ್ತಾಗಿತ್ತು. ಸರ್ಜರಿ ಮಾಡಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರೂ ಆಕೆ ಒಪ್ಪಿರಲಿಲ್ಲ. ನೋವು ತಡೆಯಲು ಅಸಾಧ್ಯ ಎನಿಸಿದಾಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.

ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಬಿ.ಸಿ.ಶಾ ನೇತೃತ್ವದ ವೈದ್ಯರ ತಂಡ 30 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 2350 ಕಲ್ಲುಗಳನ್ನು ಹೊರತೆಗೆದಿದೆ. ಕಲ್ಲುಗಳನ್ನು ಎಣಿಕೆ ಮಾಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ.

ಈ ರೀತಿ ಪಿತ್ತಕೋಶದಲ್ಲಿ ಕಲ್ಲು ಬೆಳೆದರೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಳ್ಳುತ್ತದೆ. ಜಾಂಡೀಸ್ ಸೇರಿದಂತೆ ವಿವಿಧ ಮಾರಕ ಖಾಯಿಲೆಗೆ ತುತ್ತಾಗುವ ಅಪಾಯವೂ ಇರುತ್ತದೆ. 1983ರಲ್ಲಿ ಜರ್ಮನಿಯಲ್ಲಿ ಮಹಿಳೆಯೊಬ್ಬಳ ಪಿತ್ತಕೋಶದಿಂದ 3110 ಕಲ್ಲುಗಳನ್ನು ಹೊರತೆಗೆಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...